Tuesday, April 13, 2010

ನಾನೂ ಒಂದು ಹುಡುಗಿ ಹತ್ತಿರ ಬೈಯಿಸ್ಕೊಂಡಿದ್ದೇ..

ಯುವ ವಯಸ್ಸೇ ಹಾಗೆ ಬಿಡಿ. ಏನೆ ಆಗಲಿ ಅದನ್ನೇಲ್ಲ ನೆನೆಪಿಸಿಕೊಳ್ಳೊಕೆ ಚೆನ್ನಾಗಿರುತ್ತೇನ್ನೀ..
ನಾನು ನಿಮ್ಮ ಹಾಗೆ ಹುಡುಗನಾಗಿದ್ದಾಗ ಒಂದು ಹುಡ್ಗಿ ಹತ್ತಿರ ಬೇಸ್ಕೊಂಡಿದ್ದೆ . ಕೇಳಿ ಆ ಕತೆನಾ...
೧೯೬೮ ರಲ್ಲಿ ನಾನು ಮೊದಲು ಕೆಲಸಕ್ಕೆ ಸೇರಿದ್ದು ಅಂಚೆ ಗುಮಸ್ತನ ಕೆಲಸಕ್ಕೆ(ಮೂರು ಇಲಾಖೆಗಳನ್ನು ಬದಲಿಸಿದ್ದೇನೆ ಅನ್ನಿ). ಅದೂ ಇದ್ದೂರಲ್ಲೇ ಪೋಸ್ಟಿಂಗ್ ಆಗಿ ಅಂಚೆ ಕಛೇರಿ ರಿಜಿಸ್ಟ್ರೇಷನ್ ಕೌಂಟರ‍್ ನಲ್ಲಿ ಕುಳಿತುಕೊಳ್ಳುವಂತಾಯ್ತು. "ಅಯ್ಯ, ಡಿಪ್ಲಮೋ ಮೆಕ್ಯಾನಿಕಲ್ ಮಾಡ್ಕೊಂಡು ಇಲ್ಲಿ ಟಸ್ಸೆ ಹೊಡೀತಾ ಕೂತಿದೀಯಲ್ಲೋ.." ಅನ್ನೋರು, ಪೋಸ್ಟಾಫೀಸಿಗೆ ಬರುತ್ತಿದ್ದ ನನ್ನ ಸ್ನೇಹಿತರು. ಇದೇ ಕೆಲಸಕ್ಕೆ ಎರಡು ತಿಂಗಳು ಟ್ರೈನಿಂಗ್ ಮೈಸೂರಿನಲ್ಲಿ ಮುಗಿಸಿಕೊಂಡು ಬರ‍್ಬೇಕಾಗಿತ್ತಲ್ಲ, ಸರಿ, ಮೈಸೂರು ಟ್ರೈನಿಂಗ್ ನಲ್ಲಿದ್ದಾಗ ನಡೆದದ್ದು ನಾನೀಗ ಹೇಳ ಹೊರಟಿರೋದು. ನಜರ‍್ ಬಾದ್ ಮೊಹಲ್ಲದಲ್ಲಿ ರಾಜ್ ಕುಮಾರ‍್ ಬಂಗಲೆಯಲ್ಲಿ ನಮ್ಮ ಟ್ರೈನಿಂಗ್ ಸೆಂಟರ‍್ ಮತ್ತು ಹಾಸ್ಟೆಲ್ ಇತ್ತು. ಬಹಳ ಶಿಸ್ತಿನ ಕಾಲ ಅದು; ಟೈನಿಂಗ್ ಸೆಂಟರ‍್ ನಲ್ಲಂತೂ ಕೇಳಬೇಕೇ...
ನಮ್ಮ ಬ್ಯಾಚಲ್ಲಿ ಹುಡುಗಿಯರ ಸಂಖ್ಯೆ ಇದ್ದದ್ದೇ ಎರಡು. ಛೇ ನಮ್ಮವು ಪಾಪಿ ಕಣ್ಣುಗಳು! ಏನಿದ್ದರೂ ಹೊರಗೆ ಅಡ್ಡಾಡಿಕೊಂಡು ಬರ‍್ಬೇಕು; ಅಲ್ಲಿ ಹೋಗೋಬರೋ ಬಣ್ಣ ಬಣ್ಣದ ದಿರಸಿನ ಹುಡ್ಗೇರನ್ನ ಕಂಡು ಖಷಿ ಪಟ್ಕೋಬೇಕು; ಹ್ಞುಂ, ಹರೆಯದ ಹುಡುಗರ ಹುಮ್ಮಸ್ಸು ಹಾಗೂ ವಯಸ್ಸೇ ಹಾಗೆ ಇರುತ್ತೇ ಬಿಡಿ!
ಆಗ ಬರೀ ಕಣ್ಣುಂಬಾ ನೋಡ್ಕೊಂಡು ಲಘವಾಗಿ ಒಂದೆರಡು ಸಣ್ಣ ಚುರುಕಿನ ಮಾತಲ್ಲಿ ಹುಡ್ಗೇರಿಗೆ ಛೇಡಿಸುತ್ತಿದ್ದರಷ್ಟೇ...ಈಗ. ಹುಡುಗ-ಹುಡುಗೀರ ತಮಾಷೇ. ತರ‍್ಲೇಗೊಳ್ ಹೇಗಿದೇಂತ ನೋಡಿದ್ರೆನೆ ಗಾಬರಿಯಾಗುತ್ತೇ...ನಮ್ಮಂಥ ವಯಸ್ಸಾದವುಕ್ಕೇ...ಅಲ್ವಾ...
ಸರಿ ಮುಂದೇನಾಯ್ತೂಂತಿರಾ...?
ಮೈಸರಂತ ಮೈಸೂರು, ಪ್ರವಾಸಿಗರ ಸ್ವರ್ಗ! ಅಲ್ಲಿದ್ದೇವಿ ಅಂದ್ಮೇಲೆ... ವಾರಕ್ಕೊಮ್ಮೆ ನಮ್ಮ ಸೈಟ್ ಸೀಯಿಂಗ್ ನಡೀತಾ ಇತ್ತು. ನಾನೂ ಸೇರಿ ನಾಲ್ಕು ಜನ ಒಟ್ಟಾಗಿ ಪ್ರತಿ ಭಾನುವಾರ ಕೆ.ಆರ‍್ .ಎಸ್ ಅಂದ್ರೆ ಬೃಂದಾವನ್ ಗಾರ್ಡನ್ ಗೆ ಹೋಗ್ತಾ ಇದ್ದೆವು.
ಅದೊಂದು ಭಾನುವಾರ...
ಬೃಂದಾವನ ತೋಟದಲ್ಲಿ ಸುತ್ತಾಡ್ತಾ ಕಳ್ಳೇ ಕಾಯಿ ತಿನ್ತಾ ಹೋರಟಿದ್ದೆವು. ಅದಾಗಲೇ ಸಂಜೆಗತ್ತಲಾವರಿಸತೊಡಗಿತ್ತು. ಬಣ್ಣದ ಕಾರಂಜಿಗಳು ಈಗಿನಷ್ಟು ಇರಲಿಲ್ಲವಾದ್ರೂ. ಅಲ್ಪಸ್ವಲ್ಪ ಆಗಿನ ಕಾಲಕ್ಕೆ ತಕ್ಕಂತೆ ಅಲ್ಲಲ್ಲಿ ಕಾಣಿಸುತ್ತಿದ್ದವು. ಉದ್ದಕ್ಕೂ ಸಿಮೆಂಟ್ ದಾರಿ ಇಕ್ಕೆಲಗಳಲ್ಲಿ ಹೂಗಿಡಗಳೂ ಹಾಗೂ ಕಾರಂಜಿಗಳು, ಅಲ್ಲಲ್ಲಿ ಯುವ ಜೋಡಿಗಳು, ಪುಟ್ಟ ಪುಟ್ಟ ಮಕ್ಕಳು, ಕುಟುಂಬದೊಂದಿಗೆ ಬಂದವರು ಮಾತಾಡ್ತಾನೆ ಎಲ್ಲ ಹಾಯಾಗಿ ನಡೆದು ಹೋಗ್ತಾ ಇದ್ದರು. ಅಲ್ಲಲ್ಲಿ ಹುಡುಗಿಯರ ಗುಂಪು! ಅವರನ್ನು ಹಾದು ಹೋಗೋವಾಗ ನನ್ನ ಜೊತೆಗಿದ್ದ ಸ್ನೇಹಿತರು ಅವರನ್ನ ಚುಡಾಯಿಸಿಯೇ ಮುಂದೆ ಹೋಗೋರು. ನಾನೊ ಅವರ ಜೊತೆಗೇ ಇದ್ದರು ಅಂತ ಕೀಟಲೆ ಯಲ್ಲಿ ಭಾಗಿಯಾಗುತ್ತಿರಲಿಲ್ಲ; ಭಯಾಂತ ಅಲ್ಲ, ನನ್ನ ಸ್ವಭಾವವೇ ಹಾಗೇ ಸೈಲೆಂಟೂ... ನನ್ನ ಸ್ನೇಹಿತರು ನೀನು ಪುಕ್ಕಲು ಕಣೋ ಅಂತ ಹಂಗ್ ಸ್ತಾ ನೆ ಇದ್ದರು..
ಅಷ್ಟರಲ್ಲಿ ಹುಡುಗೀರ ಚಿಕ್ಕ ಗುಂಪು ಆ ದಾರಿಯಲ್ಲಿ ಮಾತಾಡ್ತಾ ಕುಲು ಕುಲು ನಗ್ತಾ ನಿಂತಿತ್ತು. ಅವರಲ್ಲಿ ಒಂದು ಹುಡುಗಿ ನಡು ದಾರಿಯಲ್ಲೆ ನಿಂತು ತನ್ನ ಎದುರಿಗೇ ನಿಂತ ಸ್ನೇಹಿತೆಯೊಬ್ಬಳ ಜೊತೆ ಹರಟೆ ಹೋಡಿತಾ ಭಾಳ ಖಷಿಯಲ್ಲಿ ಮೈಮರೆತು ತೇಲುತ್ತಿದ್ದಳು!
ಆಗ ನನ್ನ ಸ್ನೇಹಿತರು ನನಗೊಂದು ಸವಾಲ್ ಹಾಕಿ ಹೇಳಿದರು-
"ನಿನಗೆ ದೈರ್ಯ ಇದ್ದರೆ ಆ ಹುಡುಗಿಗೆ ಭುಜಕ್ಕೆ ಗುದ್ದಿ ಮಜಾ ತಗೊಂಡ್ ಮುಂದಕ್ಕೆ ಹೋಗ್ಬೇಕು..ನೋಡೋವಾ ಆಗುತ್ತೇನೋ ಬೆಪ್ಪಾ..." ಅನ್ನೋದೇನು!
ಅಯ್ಯೋ ಅವರು ನನ್ನ ಛೂ ಬಿಟ್ಟು ತಾವು ಮಜಾ ತಗೋತೀದಾರೆ ಅಂತ ಯೋಚಿಸದೇನೆ ಸರಿ ನೋಡ್ರೋ ಎಂದು ಅದೆಲ್ಲಿತ್ತೊ ಪೌರುಷ ಗೂಳಿಯ ಹಾಗೇ ನುಗ್ಗೇ ಬಿಟ್ಟೇ ನೋಡಿ.. ಸುಂದರಳಾದ ಸುಪುಷ್ಟ ಳಾದ ಆ ಪಾಪದ  ಹುಡುಗಿ, ಭುಜ ಎದೆ ಕುಣಿಸ್ಕೋತ ಏನನ್ನೋ ತನ್ನ ಸ್ನೇಹಿತೆಗೆ ಹೇಳ್ತಾ ಅವಳ್ ಲೋಕದಲ್ಲಿ ಅವಳಿದ್ದಳ್ಳಲ್ಲ..., ನೇರವಾಗಿ ಹೋದವನೇ ಹುಡುಗಿಗೆ ಅಲ್ಲಿಗೇ ಢೀ ಕೊಟ್ಟು ಮುಂದಕ್ಕೇ ಹೋಗಿಯೇ ಬಿಟ್ಟೆ. ನೋಡ್ರೀ..
ಪಾಪಾ! ಇದ್ದಕ್ಕಿದ್ದಂತೆ ಎರಗಿ ಬಂದಿತ್ತು ಆಘಾತ! ಆ ಹುಡುಗಿ ತತ್ತರಿಸಿದಳು-
"ಯೂ... ಸ್ಟುಪಿಡ್.." ಅಂತ ಎಲ್ಲರಿಗೂ ಕೇಳೋ ಹಾಗೆ ಕಿರುಚಿದ್ದಳು;ಇನ್ನೇನು ಬೀಳೋಳು ಇದ್ದಳು, ಅವಳ ಸ್ನೇಹಿತೆ ಅವಳ ಭುಜ ಹಿಡಿದು ನೆರವಾದಳು ನೇವರಿಸಿದಳು. "ಹೋಗಲಿ ಬಿಡೇ..ಈಡಿಯಟ್ಸ್‌ "ಅಂದಳು.

ನಾನೊ ಜಾಣನಾಗಿ ಬಿಟ್ಟೆ ಸುಮ್ಮನ್ನೆ ಮುನ್ನುಗ್ಗಿ ದೌಡಾಯಸಿದವನು ತಿರುಗಿ ನೋಡಬೇಕೇಕೆ ನಾನೂ...
ಆಮೇಲ್ ನನ್ನ ಸ್ನೇಹಿತರೆಲ್ಲ... ಪರವಾಯಿಲ್ಲ ಗಂಡ್ಸೂ.. ಕಣೋ ಅಂತ ಭುಜತಟ್ಟಿದ್ದೇ ತಟ್ಟಿದ್ದು..
ಅಂತೂ ಆ ಹರೆಯದ ಹುಮ್ಮಸ್ಸಿನ್ಲಿ ಒಬ್ಬ ಸುಂದರಳಾದ ಹುಡುಗಿ ನಾನು ಕೊಟ್ಟ ಲೈಟ್ ಷಾಕ್ ಗೆ ಬಲೇ ಟೈಟ್ ಆಗಿ ಬೈದಿದ್ದಳು!
ಅದೇ ಅವಳೇನಾದ್ರೂ ನನ್ನ ಗುರುತಿಸಿ ಹಾಟ್ ಆಗಿಬಿಟ್ಟಿದ್ದಿದ್ರೇ.... ಈಗಿನ ಕಾಲ ಅಲ್ಲ ನೋಡಿ...
ಸುಮ್ಮನೆ ದೂಳ್ ತರಾ ಒರೆಸಿಕೊಂಡ್ ಹೋಗೋಕೆ.. ಅಥವಾ ಏನು ಆಗೆ ಇಲ್ಲಾಂತ ಸುಮ್ಮನೇ ಹೋಗೋಕೆ!
ಅದೋ ಭಾಳ ಮಡಿಂತಿಕೆ ಕಾಲ ಅಲ್ಲವೇ..?
ಏನೆ ಆಗಲಿ, ಈ ಇಳಿ ವಯಸ್ನಲ್ಲೂ.. ಅದನ್ನೆಲ್ಲ ನೆನೆಪಿಸಿಕೊಳ್ಳೊಕೂ ಚೆನ್ನಾಗಿರುತ್ತೇನ್ನೀ..