ಜೀವ ಸಮುದ್ರ-೨

ಸುಲಕ್ಷಣ ಕಾಲೇಜು ಹುಡುಗಿಯೇ. ಏನೂ ಅರ್ಥವಾಗದ ಅಮಾಯಕಳೇನಲ್ಲವಲ್ಲ.... ಮಹೇಶ ತಾನೆ ಮೆಚ್ಚಿ ಮದುವೆಯಾದಕೆ. ಅವಳ ಸ್ನಿಗ್ದ ಸೌಂದರ್ಯದಲ್ಲಿ ಕಾಂತೀಯ ಸೆಳೆತವಿದೆ. ದೈಹಿಕ ಚೆಲ್ವಿಕೆಯಲ್ಲಿ ಹೆಣ್ತನವೇ ಹೊನಲಾಗಿ ಹರಿಯದಲ್ಲ. ಅವಳ ಒಂದೇ ಒಂದು ಕಿರುನಗೆ ಮಿಂಚಿನಲ್ಲಿ ಬಯಕೆ ಹೊಮ್ಮಿಸಿದ ಆಹ್ವಾನವೇ ಕಾಣಸಿಗುವುದಿಲ್ಲ. ಮಹೇಶನಂತು ಅವಳ ಸಾಂಪ್ರಾದಾಯಿಕತೆಗೆ ಒಂಚೂರು ಅಡ್ಡಿ ಪಡಿಸಿದವನಲ್ಲ. ಅವಳ ದೈವ ಭಕ್ತಿಗೆ, ವ್ರತ ನೇಮ ನಿಷ್ಠೆಗೆ ಪ್ರೋತ್ಸಾಹ ನೀಡಿದವನೇ.....

ಸಾಮಾನ್ಯವಾಗಿ ಕಲಾವಿದರೆಂದರೇ ಸಿಗರೇಟು, ಕುಡಿತ, ಹೆಣ್ಣು ಇತ್ಯಾದಿ ದಾಸರೆಂದೇ ಪ್ರತೀತಿ. ಮಹೇಶ ಅಂಥವನೇನಲ್ಲ...ನೋಡಲು ಅವನೂ ಸುಂದರನೂ ಸದೃಢನೂ ಆಗಿದ್ದಾನೆ. ಸುಲಕ್ಷಣಳ ನೀರಿಕ್ಷೆಗೆ ತಕ್ಕಂತೆಯೆ ಸಭ್ಯನಿದ್ದಾನೆ. ಅವಳನ್ನು ಪ್ರೀತಿಸುವ, ಅರ್ಥಮಾಡಿಕೊಳ್ಳುವ ಮನಸ್ಸೆಂಬುದಿದೆ ಅವನಿಗೂ. ಅದರೇನು ! ಅವಳಿಗೊಂದು ಮನಸ್ಸಿದೆಯೆ.... ಸಾಮಾನ್ಯವಾಗಿ ಎಲ್ಲ ಹೆಂಗಸರೂ ಗಂಡಿಗೆ ಹೆಣ್ಣನ್ನು ಅರ್ಥಮಾಡಿಕೊಳ್ಳ ಬೇಕೆಂದು ಬಯಸುತ್ತಾರೆ. ಅವರೂ ಗಂಡನ್ನು ಅರ್ಥ ಮಾಡಿಕೊಳ್ಳೊ ಮನಸ್ಸು ಹೊಂದಿರಬೇಕೆಂಬುದನ್ನು ಮರೆತೇ ಬಿಡುತ್ತಾರೇನೋ...ಅವರ ಅಪೇಕ್ಷೇಗೆ ತಕ್ಕಂತೆ ಗಂಡನಿರಬೇಕಷ್ಟೆ. ಗಂಡನ ಅಪೇಕ್ಷೆ ನಿರೀಕ್ಷೆಗಳೇನೆಂಬುದರ ಗೊಡವೆ ಬೇಡವೇ ಬೇಡವಾದರೆ ಹೇಗೆ....? ಸುಲಕ್ಷಣಳ ಈ ಬಗೆಯ ದಾಂಪತ್ಯದಲ್ಲಿ ಅವಳಿಗಾದರೂ ಸಂತೋಷವೆಂಬುದಿದೆಯೇ ? ಇದ್ದರೆ ಅದ್ಯಾವುದು...? ಕೇವಲ ಒಟ್ಟಿಗೆ ಒಂದೇ ಸೂರಿನಡಿ ಬದುಕುತ್ತಿರುವುದು ಏನು ? ಎಲ್ಲ ಹೆಣ್ಣುಗಳಂತೆ ಮನೆಗೆ ಬೆಲೆಬಾಳುವ ಕಲರ್ ಟಿ.ವಿ. ಮಿಕ್ಸಿ, ಫ್ರಿಜ್, ಫರ್ನಿಚರ್ಸ ಇತ್ಯಾದಿಗಳನ್ನೆಲ್ಲ ತರಿಸಿದ್ದಾಳೆ. ಪಾತ್ರೆ, ಪರಡಿ, ಬೆಳ್ಳಿ ಸಾಮಾನು, ಒಡವೆ ವಸ್ತ್ರಗಳನ್ನೂ ಮಾಡಿಸಿಕೊಂಡಿದ್ದಾಳೆ. ಅವುಗಳ ಮೇಲಿರುವ ಪ್ರೀತಿ ತನ್ನ ಮೇಲಿರ ಬಾರದೇನು ? ಇದನ್ನೂ ಮಹೇಶ ಕೇಳಿಯೂ ಇದ್ದಾನೆ. ಪ್ರೀತಿ ಎಂದರೆ ಅವಳು ಏನೆಂದು ಕೊಂಡಿದ್ದಾಳೋ.... ಅವಳ ಅರ್ಥದಲ್ಲಿ. ತುಂಬ ತಲೆ ಕೆಡಿಸಿಕೊಂಡಿದ್ದಾನೆ.


ಮಹೇಶ ಹವ್ಯಾಸಿ ಕಲಾವಿದ ಮಾತ್ರವಲ್ಲ ಅವನು ಸರ್ಕಾರಿ ಕಛೇರಿಯೊಂದರಲ್ಲಿ ಗುಮಾಸ್ತನೂ ಹೌದಲ್ಲ....ಮನೆಯಿಂದ ಕಛೇರಿಗೆ ದೂರವೇ ಆಗುತ್ತದೆ. ನಡೆದು ಹೋಗುವ ದಾರಿಯಂತೂ ಅಲ್ಲವೇ ಅಲ್ಲ. ತಾನೋಂದು ದ್ವಿಚಕ್ರ ವಾಹನ ಕೊಂಡರೆ ಮಧ್ಯಾಹ್ನ ಮನೆಗೆ ಬಂದು ಹೆಂಡತಿಯೊಡನೆ ಸರಸ ಸಂಭಾಷಣೆಯಲ್ಲಿ ಊಟ ಮುಗಿಸಿಕೊಂಡು ಕೊಂಚ ವಿರಮಿಸಿಕೊಂಡು ಹೋದರೆ ಚೆನ್ನ ಎಂದೇ ಭಾವಿಸಿದ. ಅಲ್ಲದೇ, ತನ್ನ ಹವ್ಯಾಸಿ ಕಲೆಯ ಸಲುವಾಗಿ ಹೊರಸಂಚಾರ ಹೋಗಲೂ ಸುಲಭವೇ ಆದೀತೆಂದು ಬಗೆದ. ಅದನ್ನು ಕೊಳ್ಳುವುದೇನು ಸುಲಭ ಸಾಧ್ಯವೇ ? ದೊಡ್ಡ ಸಮುದ್ರದಂತಿರುವ ಅವನ ಕಛೇರಿಯಲ್ಲೇ ಇವನಂಥ ಯಕಃಶ್ಚಿತ್ ನಿರೀಕ್ಷಕ ಹುದ್ದೆಯಲ್ಲಿರುವಾತನಿಗೆ ಅದ್ಹೇಗೆ ವೆಹಿಕಲ್ ಅಡ್ವಾನ್ಸ ಕೊಟ್ಟಾರು? ಇವನದೇನು ಎಕ್ಸಿಕ್ಯೂಟಿವ್ ಜಾಬ್ ಏನು? ಕಾನೂನಿನ ತೊಡಕೆಂಬುದೇನಿಲ್ಲವಲ್ಲ. ಕೊಡಲು ತಾರತಮ್ಯವೇಕೆ ಅವರಿಗೆಂಬುದೇ ಮಹೇಶನ ವಾದ. ಎರಡು ಯೂನಿಯನ ಒಕ್ಕೂಟಗಳ ನಾಯಕರಿಗೆ ಇದೇನೂ ಒಂದು ಸಮಸ್ಯೆಯಾಗಿಯೆ ಕಂಡಿಲ್ಲ. ಎಂದೂ ತನ್ನಷ್ಟೆಕ್ಕೆ ಗೊಣಗುವ ಮಹೇಶನಿಗೆ. ” ಅಯ್ಯೋ ಹೋಗಲಿ ಬಿಡೀಂದ್ರೆ..... ನಿಮಗೆ ವೆಹಿಕಲ್ ಅಡ್ವಾನ್ಸ್ ಸಿಗದಿದ್ದರೇನು ಕೊಳ್ಳೆ ಹೊಗಲಿಲ್ಲ. ಎಲ್ಲ ಒಳ್ಳೆಯದಕ್ಕೆ ನೀವು ಆರಾಮವಾಗಿ ನಡಕೊಂಡು ಆಫೀಸಿಗೆ ಹೋಗಿ ಬನ್ನೀಂದ್ರೆ... ನಿಮ್ಮ ಜೀವಕ್ಕೇನು ಭಯ ಇರೋಲ್ಲ ಅಲ್ವಾ ... ” ಅನ್ನೋದೇನು. ಎಲಾ ಇವಳಾ! ತನ್ನ ಜೀವ ಇವಳಿಂದ ಏನೆಲ್ಲ ಸುಖವನ್ನು ಬಯಸ್ಸುತ್ತೇಂತ ಸರಿಯಾಗಿ ಕಂಡಿದ್ದಾಳೆಯೇನು ! ತಾನೋಂದು ಜೀವ ಜಂತುವಿನ ಹಾಗೆ ಇವಳೆದುರಿಗೆ ಓಡಾಡಿಕೊಂಡಿದ್ದರೇ ಸಾಕೆಂದು ಕೊಂಡಿದ್ದಾಳೋ... ಈ ಪ್ರಾಣಿಗೆ ಆಸೆ ಅಕಾಂಕ್ಷೆ, ಕಾಮನೆಗಳಿವೆ ಎಂಬುದನ್ನೇಕೆ ಅರಿಯಳಿವಳು? ಮೂಲತಃ ಶ್ರೀಮಂತ ಮನೆತನದ ಹೆಣ್ಣಿವಳು. ತನ್ನ ಪರಿಸರದಲ್ಲಿ ಸುಖಭೋಗಗಳೇನೇಂದು ಕಂಡರಿಯಲಾರದವಳೇನು ? ಅವಳ ತಂದೆ ಪ್ರಸಿದ್ದ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿದ್ದರು. ಬಿಸಿನೆಸ್ ನಲ್ಲಿ ಏನೋ ಪಾಲುದಾರರು ವಂಚಿಸಿದರೆಂದು ಆ ಚಿಂತೆಯಲ್ಲಿ ಕುಡಿತಕ್ಕೆ ಪಕ್ಕಾಗಿ ಸಾವಿಗೆ ಶರಣಾದರು. ಆಗ ಅವರಿಗೆ ವಯಸ್ಸು ನಲವತ್ತೈದು. ಅದು ಸಾಯುವ ವಯಸ್ಸಲ್ಲ. ಅವರ ಅಲ್ಪಾಯುಷ್ಯತನಕ್ಕೆ ಸುಲಕ್ಷಣ ಹೇಳುವ ಕಾರಣ ಹೆಣ್ಣಿನ ಭೋಗಲಾಲಸೆಯೇ... ಅವರು ತನ್ನ ಅಮ್ಮನನ್ನು ತುಂಬಾ ಪೀಡಿಸುತ್ತಿದ್ದರಂತೆ ಅನ್ನುತ್ತಾಳೆ. ಇರಲಾರದೆಂದೇ ಮಹೇಶ ವಾದಿಸುತ್ತಾನೆ. ಯಾಕೆಂದರೆ ಅವಳ ತಾಯಿ ವಿಶಾಲಾಕ್ಷ್ಮಮ್ಮ ಎಂದು ತನ್ನ ಪತಿ ದೇವರ ಬಗ್ಗೆ ಚಕಾರವೆತ್ತಿ ದೂರಿದಾಕೆಯೇ ಅಲ್ಲ. ಆ ಬಗೆಯ ಅರ್ಥ ಬರುವ ಮಾತುಗಳನ್ನು ಆಕೆಯಿಂದ ಕೇಳಿಯೂ ಇರಲಿಲ್ಲ.

ಸುಲಕ್ಷಣ ಮಾತ್ರ ಮೊಂಡು ವಾದ ಮಾಡುತ್ತಾಳೆ. ಏಕಾಂತಗಳಲ್ಲಿ ಅವನು ಸ್ವಲ್ಪ ಸನಿಹ ಬಂದರೂ ಸಾಕು. ನೀವು ನನ್ನ ಪೀಡಿಸಬೇಡಿ. ನನಗೆ ಬೆಳಗಿನಿಂದ ಅಡಿಗೆಮನೆಯಲ್ಲಿ ದಣಿದು ಸುಸ್ತಾಗಿದೆಯೆಂದು ಬೆನ್ನು ಹಾಕಿ ಮಲಗಿಬಿಡುತ್ತಾಳೆ. ಗಂಡೆಂದರೆ ಹೆಣ್ಣನ್ನು ಪೀಡಿಸಿಯೇ ಭೋಗಿಸುವಾತನೇನು... ಹೆಣ್ಣಿಗೂ ದೈಹಿಕ ಬಯಕೆ ಎಂಬುದಿಲ್ಲವೇನು ? ಅಥವಾ ಇದ್ದರೂ ಇವಳಿಗೆ ಭಯವೇ ಮೇಲಾಗಿ ಕಾಡುವುದೇ ಎಂಬ ಗುಮಾನಿಯೆ ಅವನಿಗಾಗಿದೆಯಲ್ಲ.

ಮಹೇಶನಿಗೆ ಮೊದಲ ವರ್ಷ ಮಧುಚಂದ್ರಕ್ಕೆಂದು ಊಟಿಗೆ ಹೋಗುವ ಪ್ರಬಲ ಇಚ್ಛೆಯುಂಟಾಗಿತ್ತಲ್ಲ..... ಅವಳನ್ನು ಹೇಗೋ ಎಳೆದುಕೊಂಡು ಹೊರಟೆಬಿಟ್ಟಿದ್ದ. ಅಲ್ಲಿನ ನಿಸರ್ಗ ರಮಣೀಯ ದೃಶ್ಯಗಳ ಹಿನ್ನೆಲೆಯಲ್ಲಿ ತನ್ನ ಹೆಂಡತಿಯ ಚೆಲುವನ್ನೆಲ್ಲ ಸೆರೆ ಹಿಡಿಯುವ ಹಂಬಲ ಅವನಿಗೆ. ಅವಳು ಮುಕ್ತ ಮನಸ್ಸಿನಿಂದ ತೆರೆದುಕೊಂಡರೆ ತಾನೇ. “ ಅಯ್ಯೋ ಬೇಡಾರಿ, ಪೋಟೋ ತೆಗೆಸಿಕೊಂಡ್ರೆ ನಮ್ಮ ಆಯಸ್ಸು ಕಡಿಮೆಯಾಗುವುದಂತೆ... ನಾವು ಮಂತ್ರಾಲಯಕ್ಕಾದರೂ ಹೋಗಿ ರಾಯರ ದರುಶನ ಮಾಡಿದರೆ ಪುಣ್ಯ ಬರುತ್ತಿತ್ತು. ಇದೇನಪ್ಪ ಇದೆಲ್ಲ ಹೊಲಸು ! ನಾವಿಬ್ಬರೇ ಹೀಗೆ ಹೊರಳಾಡುವುದು. ನಂಗೂಂಚೂರು ಇಷ್ಟವಿಲ್ಲ ಅನ್ನೋದೇನು ಇವಳೆಂಥ ಹೆಣ್ಣಪ್ಪ! ಇವಳ ತಲೆಯಲ್ಲಿ ಅದೇನು ಸೆಗೆಣಿ ತುಂಬಿದೆಯೋ ....

ಗಂಡು ಹೆಣ್ಣು ಸಮ್ಮಿಲನದ ಹೊಯ್ದಾಟ ಅನುಭವಿಸುವುದನ್ನು ಹೊಲಸೆನ್ನುವುದೇ.... ಆ ಕ್ರಿಯೆ ಜರುಗಿ ತಲುಪುವ ತುರಿಯಾವಸ್ಥೆಯಲ್ಲಿ ಸಾವನ್ನು ದಿಕ್ಕರಿಸುವ ಸಂತೃಪ್ತಿಯನ್ನೆ ಇವಳು ಕಂಡು ಭಯವಿಹ್ವಳೇ ಆಗಿಬಿಡುತ್ತಾಳಲ್ಲ... ಊಟಿಯ ಆ ಚಳಿಗಾಲದ ರಾತ್ರಿಯಲ್ಲಿ ಇವಳನ್ನು ಬಲವಂತದಿಂದಲೇ ಎಳೆದು ಕೊಂಡು ರತಿಯಲ್ಲಿ ರಮಿಸಿ ಜೀವ ಜಗತ್ತಿನ ಭ್ರಮೆ ತೊಲಗಿದವನಂತೆ ತಾನು ನಿರ್ವಾತದಲ್ಲಿ ಅಂಗಾತನಾಗಿದ್ದಾಗ, ಆದುದೇನು, ಅವಳು ಅತೀವ ಗಾಬರಿಯಾಗಿದ್ದಳಲ್ಲ... “ ರೀ ಬೇಡಾರಿ ಇನ್ನೊಮ್ಮೆ ಬೇಡಾರಿ ನಂಗೆ ಇದೆಲ್ಲ ಹಿಡಿಸೊಲ್ಲ.... ನನ್ನ ಕಾಡಬೇಡ್ರಿ ನಿಮ್ಮ ದಮ್ಮಯ್ಯ ...” ಕೈ ಮುಗಿದಿದ್ದಳಲ್ಲ,, ಹುಚ್ಚಿಯಂತೆಯೆ.

“ ಯಾಕೆ ! ಸುಲೂ ನಿನಗೆಲ್ಲಿ ನೋವಾಯಿತೇ ..... ನಿಂಗೊಂಚೂರು ಹಿಂಸೆಯಾಗದಿರಲೆಂದು ಒಂದಿನಿತು ಭಾರ ಬಿಡದೇನೇ ನಿನ್ನನ್ನು ತಣಿಸಿದೆನೆಂದುಕೊಂಡೆ. ಆದರೆ, ನೀನು ನೀನು ! .... ಮನುಷ್ಯನಿಗೆ ಊಟ ತಿಂಡಿಯಷ್ಟೆ ಸಹಜ ಕ್ರಿಯೆ ಎಂದರೆ ನೀನು ನಂಬಲಾರೆಯಲ್ಲಾ....” ಅಂದು ಅವನು ತೀರ ಖಿನ್ನನಾಗಿ ಹೋಗಿದ್ದ.

ಊಟಿಯಲ್ಲಿ ಮಧುಚಂದ್ರವೆಂಬುದು ಮಧುವೆ ಇಲ್ಲದ ಕಹಿ ಜೇನಿನಂತಾಗಿತ್ತು. ಜೀವ ಸಮುದ್ರದ ಅಲೆಗಳು ಹುಣ್ಣಿಮೆ ಚಂದಿರನ ಬೆಳಕಲ್ಲಿ ಉಕ್ಕುಕ್ಕಿ ಹರಿಯುವುದಿನ್ನೆಲ್ಲಿ... ? ಅಲ್ಲಿ ಚಂಡ ಮಾರುತವೇ ಬೀಸಿತ್ತು ಮಾರನೆಯ ದಿನ ಊಟಿಯ ತಣ್ಣನೆ ಹವೆಯಲ್ಲಿ ಅವನ ಮಧು ಚಂದ್ರದ ಕಾವೆಲ್ಲ ಇಳಿದು ಹೋಗಿತ್ತು... ಮರಳಿ ಊರಿಗೆ ಬರುವಾಗಲೂ ತನ್ನ ಪಕ್ಕದಲ್ಲೋಂದು ಸುಂದರ ಬೊಂಬೆ ಕುಳಿತಿದೆ. ಅದು ಹೆಣ್ಣಲ್ಲ : ಹೆಂಡತಿ ಎಂಬ ಹೆಸರಿನ ಬೊಂಬೆಯಷ್ಟೆ... ಎಂದೇ ಪೇಚಾಡಿಕೊಂಡಿದ್ದ.

ಹಾಗೆಂದೇನೂ ಅವಳ ಮೇಲಿನ ಪ್ರೀತಿ ಬಿಟ್ಟು ಕೊಡಲಾರ. ಅವಳ ಬೇಕು ಬೇಡಗಳಿಗೆಲ್ಲ ಸ್ಪಂದಿಸದೇನೂ ಇರಲಾರ ಮಹೇಶ. “ ರೀ ಮಂತ್ರಾಲಯಕ್ಕೆ ಹೋಗೋಣಾರಿ. ರಾಯರ ದರುಶನ ಮಾಡಿದರೆ ತುಂಭಾ ಮನಸ್ಸಿಗೆ ಸಮಾಧಾನ ಬರುತ್ತೇಂತರೀ... ನಿಮಗ್ಯಾಕೋ ನನ್ನ ಕೈ ಹಿಡಿದ ಮೇಲೆ ಸಮಾಧಾನವೆಂಬುದೇ ಇಲ್ಲ.” ‘ ಹೌದೇ .... ಬರೀ ನಿನ್ನ ಕೈ ಹಿಡಕೊಂಡು ನಾನೇನು ಸುಖ ಕಾಣಬಲ್ಲೆ ಹೇಳೂ... ಎಂದು ಚೀರಬೇಕೆನಿಸಿತ್ತು. ಇನ್ನೇನು ಅವಳ ಹಠವೇ ಗೆಲ್ಲಬೇಕಲ್ಲ ತಾನು ಗಂಡನಾಗಿ ಮಣಿಯಬೇಕಲ್ಲ. ಮಣಿದಿದ್ದ ಮಂತ್ರಾಲಯ ರಾಯರ ಪಾದಕ್ಕೆ ಅವಳೊಂದಿಗೆ. ಈ ರಾಯರೇ ಇವಳಿಗೆ ಕವಿದಿರುವ ಮಂಕು ಹರಿಸಬೇಕೆಂದು ಬೇಡಿಕೊಂಡಿದ್ದ.’ ಅಲ್ಲಿಯಂತೂ ಅಪ್ಪಿತಪ್ಪಿ ಅವಳಿಗೆ ಅಂಟಿಕೂರುವ ಹಾಗಿಲ್ಲ... ‘ರೀ ರೀ ದೂರ ದೂರ.... ಎಂದು ಹಾವು ಮೆಟ್ಟಿದವಳಂತೆ ಹಪಹಪಿಸಿದ್ದಳು. ಮಂತ್ರಾಲಯ ಬಿಡುವವರೆಗೂ ಅವಳೋಂದು ದೂರದ ಬೆಟ್ಟದ ಹಾಗೆ ಕಣ್ಣಿಗೆ ರಾಚಿದರೂ ಕೈಗೆಟುಕದ ಹಾಗೆ ಕಂಡಿದ್ದಳು. ಅಲ್ಲಿಂದ ಬಂದ ಮೇಲೋಮ್ಮೆ ಹೇಳಿದ್ದ, ’ “ ನಿನ್ನ ಇಷ್ಟದಂತೆ ನಿನ್ನನ್ನು ಮಂತ್ರಾಲಯಕ್ಕೆ ಯಾತ್ರೆ ಮಾಡಿಸಿದೆನಲ್ಲ... ಈಗ ನನ್ನೊಂದಿಗೆ ಒಂದು ಬಾರಿ ಮುಂಬೈಗೆ ಬಾ ಆ ಮಾಯಾನಗರಿಯ ಜೀವ ಸಮ್ಮೋಹಕ ಸೆಳೆತವನ್ನು ಕಾಣುವೆಯೆಂತೆ. ಅಲ್ಲಿನ ಲಲನೆಯರ ಮೊಗದಲ್ಲಿ ಚಿಮ್ಮುವ ಜೀವನೋತ್ಸಾಹವನ್ನು ಕಂಡು ನೀನೇ ಬೆರಗಾಗುವೆಯಂತೆ ” ಅಂದಿದ್ದ.

“ ಅಯ್ಯೋ ಮುಂಬೈಗೆನ್ರಿ... ಬೇಡಾರಿ ಅದು ಮಹಾಪಾತಕಿಗಳ ನೆಲೆಯಂತೆ ಸಿನಿಮಾ ಥಳುಕಿನ ಪ್ರಪಂಚವಂತೆ. ಕಾಮಾಟಿಪುರದ ಮಾಯಾಂಗನೆಯರ ಜಾಲವಂತೆ ..... ಮತ್ತೆ ಮತ್ತೇ... ” “ ಸಾಕೇ ಮಹಾರಾಯತಿ ನಿನ್ನ ಹಾಳು ವರ್ಣನೆ... ಸಾಕು ಮಾಡು. ಅಲ್ಲಿ ಬೀಚಿಗೆ ಹೋಗೋಣವೇ. ಸಮುದ್ರವನ್ನು ನೋಡುತ್ತಾ ಕುಳಿತರೆ ನಿನಗೆ ಈ ಜೀವದ ಬಗ್ಗೆ ಏನಾದರೂ ಜ್ಞಾನೋದಯವಾದೀತು.... ಸುಮ್ಮನೆ ಹೊರಡು ” ಗದರಿಸಿಯೇ ಹೊರಡಿಸಿದ್ದ. ಧುಸುಮುಸು ಗುಡುತ್ತಾ ಹೊರಟಳು ಸುಲಕ್ಷಣ. ಮುಂಬೈ ತಲುಪಿದ್ದರು. ದಾದರನಲ್ಲಿ ತಂಗಿದ್ದರು . ಸಂಜೆ ಜುಹೂ ಬೀಚಿಗೆ ಹೋರಡುವುದೆಂದಾಗ, ಅವಳೀಗೆ ಚೂಡಿದಾರ ಧರಿಸಲು ಹೇಳಿದ. ಈ ಪ್ರವಾಸಕ್ಕೆಂದೇ ಅವಳು ಬೇಡವೆಂದರೂ ಅದನ್ನು ಕೊಂಡು ತಂದಿದ್ದನಲ್ಲ. ಈ ತನ್ನ ಮನದನ್ನೆಯನ್ನು ಚೂಡಿದಾರ್ ನಲ್ಲಿಯೇ ನಿಟ್ಟಿಸುತ್ತಾ ಮನ ದಣಿಯೋ ತನಕ ಮುಂಬೈ ಸುತ್ತುವುದೆಂದು ನಿರ್ಧರಿಸಿದ್ದಾನೆ. ಬಹಳ ಲಷ್ಟಪಟ್ಟು ಗಂಡನ ಆಜ್ಞೆ ಶಿರಾಸಾವಹಿಸಿದಳು. ಅವಳು ಆ ತೆಳು ನೀಲವರ್ಣದ ಮಿರಮಿರನೇ ಮಿಂಚುವ ಚೂಡಿದಾರ್ ನಲ್ಲಿ ಹೊರಬಂದಾಗ ತನ್ನ ಕಣ್ಣುಗಳನ್ನು ತಾನೇ ನಂಬದಾದ. ಎಂಥ ಅಪ್ಸರೆ ಇವಳು ! ನನ್ನವಳು ಎಂಬುದೇ ಹೆಮ್ಮೆ ! ಅದರ ಹಿಂದೆಯೇ ಇವಳೋಂದು ಗೊಡ್ಡು. ಹೆಣ್ತನದ ಚೆಲ್ವಿಕೆಗೆ ಅಪವಾದ. ಗಂಡನಾದವನ ರಸಿಕತೆಗೆ ಅಡ್ಡಗೋಡೆ. ತಾನಾಗಿದ್ದಕ್ಕೆ ಸರಿ ಹೋಯಿತು ಇವಳೋಡನೆ. ತನ್ನ ಸ್ಥಾನದಲ್ಲಿ ಇನ್ಯಾವನಾದರೂ ಆಗಿದ್ದರೆ ಈ ಥಳುಕು ಬಳಕಿನ ಪ್ರಪಂಚಕ್ಕೆ ಬೇಕಾದ ಸೋಫೆಸ್ಟಿಕೇಟೆಡ್ ಹೆಣ್ಣು ಇವಳಲ್ಲವೆಂದೂ ತನ್ನಷ್ಟಕ್ಕೆ ಬೇರೋಂದು ದಾರಿ ಹುಡುಕಿಕೊಂಡಿರೋನು... ಅನ್ನಿಸಿದಾಗ ಫಕ್ಕನೆ ನಗುಬಂದಿತ್ತು ಮಹೇಶನಿಗೆ.

“ ಯಾಕೆ ನಗತೀರಿ...” ಇಮ್ಮೆ ತನ್ನ ಉಬ್ಬಿದೆದೆ ಎಡೆಗೆ ಮತ್ತೋಮ್ಮೆ ತನ್ನ ಹಿಂಬದಿ ನಿತಂಬದೆಡೆಗಳಿಗೆ ಕಣ್ಣೋಟವನ್ನು ಹಾಯಿಸಿದಳು ಸುಲಕ್ಷಣಾ. “ ಹ್ಞಾಂ ಏನಿಲ್ಲ .... ನಡಿ ನಡಿ ಹೊತ್ತಾಯ್ತು ...” ಎಂದ. ಸೀದಾ ಜುಹೂ ಬೀಚಿಗೇನೆ ಬಂದಿದ್ದರು. ಯಥಾ ಪ್ರಕಾರ ಮಹೇಶ ದೂರದ ಕ್ಷಿತಿಜದತ್ತ ದೃಷ್ಟಿ ಹಾಯಿಸಿ ಕುಳಿತಿದ್ದಾನೆ. ಅವನಿಗೆ ಅರಿವಿಲ್ಲದಂತೆ ಹೇಳಲಾರಂಭಿಸಿದ. ” ನೋಡು ಸುಲೂ, ಈ ಮಹಾ ಸಮುದ್ರ ನಮ್ಮ ಜೀವ ಭಾವಗಳೋಂದಿಗೆ ನಡೆವ ದಿನ ನಿತ್ಯದ ತಾಕಲಾಟಗಳ ಸಂಕೇತ. ನಮ್ಮ ಅತಿವ್ಯಸ್ತ ಬದುಕಿಗೆ ಪ್ರೀತಿ- ಪ್ರೇಮದ ಬೆಸುಗೆ ಹಾಕುವಂಥ ರೋಚಕ ಮಿಡಿತಗಳಿಲ್ಲಿವೆಯಲ್ಲ. ನಮ್ಮ ಸಾವು ನೋವುಗಳನ್ನು ಮೊಗೆದು ಮುಕ್ಕಳಿಸುವ ಮೊರೆತಗಳೂ ಇಲ್ಲಿವೇಯೇ. ಈ ವಿಶಾಲ ವಿಶ್ವದ ಪ್ರೌಢ ಸೌಂದರ್ಯವಿಲ್ಲೆ . ನಿಗೂಡ ರಹಸ್ಯಗಳು ಇಲ್ಲೆ ಹುದುಗಿದೆ ಅಷ್ಟೆ. ಅಲ್ಲ ಕಣೇ ಹೆಣ್ಣಿನ ಅಂತರಾಳದ ಅದಮ್ಯ ಚೇತನವಿಲ್ಲೆ ....ಅವಳ ದೇಹದ ಅಂಕು ಡೊಂಕಿನ ಅನನ್ಯ ಸೆಳೆತಗಳೂ ಈ ಅಲೆಗಳಲ್ಲೆ. ಗಂಡಿನ ಅಂಕೆಗೆ ಸಿಗದೆ ಅವಳ ಮನಸ್ಸಿನ ಆತಂಕ ತಳಮಳಗಳೂ ಇಲ್ಲೆ ಕಂಗೋಳಿಸುತ್ತವೆ. ಕಡೆಗೆ ನೋಡು, ಅದೋ ಆ ಕ್ಷಿತಿಜದತ್ತಲೇ ದೃಷ್ಟಿ ಕೀಲಿಸುತ್ತಾ ತದೇಕ ನಿಟ್ಟಿಸಿನೋಡು ಸುಲೂ ...ಗಂಡು ಹೆಣ್ಣೀನ ಸಂಬಂಧವೆಂಬುದು ಹೀಗೆಯೇ.. ಅನತಿ ದೂರದಲ್ಲಿ ಎಲ್ಲರ ನೋಟಗಳು ಪರಸ್ಪರ ಹೊಂದಿಕೊಂಡಿವೆ, ಬೆಸೆದುಕೊಂಡಿವೆಯೆಂದು ಭಾವಿಸುತ್ತೇವೆ...ಇಲ್ಲ ಕಣೇ ಅವರವರ ಪರಸ್ಪರ ಸಂಬಂಧವೆಂಬುದು ಅದಕ್ಕಿಂತಲೂ ಆಚೆಗಿದೆ. ದೂರದಲ್ಲಿ ಕಾಣುವ ಕಣ್ಣಂಚಿನ ಕ್ಷಿತಿಜದಂತೆಯೇ ನೆಲಜಲದೊಂದಿಗೆ, ಸೂರ್ಯನ ಹೊಂಬೆಳಕಿನೊಂದಿಗೆ ಹೊಳೆಯುತ್ತಲೇ ಬೇರಾರಿಗೂ ಎಟುಕದಂತೆ ಅವರಿಬ್ಬರಿಗೆ ಮಾತ್ರ ದಕ್ಕುವಂತೆ, ಅದ್ಯಾವುದೋ ಅನೂಹ್ಯ ಬಿಂದುವಿನಲ್ಲಿ ಅನಂತದಲ್ಲೆ ಅವರಿಬ್ಬರೂ ಮಾನಸಿಕ- ದೈಹಿಕವಾಗಿ ಒಂದಾಗಿ ಹೋಗಿರುತ್ತಾರೆ.... ”ಅವನು ಇನ್ನೂ ಆವೇಶ ಭರಿತನಾಗಿ ಹೇಳುತ್ತಲೇ ಇದ್ದನೇನೋ, ”ಅಯ್ಯೋ ಸಾಕು ಮಾಡ್ರಿ .. ನಿಮ್ಮಭಾವುಕ ವರ್ಣನೆನಾ. ಅದೆಲ್ಲ ನನ್ನ ತಲೆಗೆ ಹೋಗಲ್ಲಾ... ಏಳ್ರಿ ಹೋಗೋಣಾ ಮೊದ್ಲು ಇಲ್ಲಿಂದ....”

“ ಅಲ್ವೆ ಇಲ್ಲಿ ಕೇಳೇ....ನಾನು ಹೇಳೋದು ಸ್ಪಲ್ಪ ಅರ್ಥ ಮಾಡಿಕೊಳ್ತೀಯಾ...” ಅಂಗಲಾಚುವನಂತಾದ ಮಹೇಶ. ಮತ್ತೆ ಹೇಳಿದ – “ ಇಲ್ಲಿ ಗಂಡು – ಹೆಣ್ಣು ಪರಸ್ಪರ ಮಿಲನದಲ್ಲಿ ಅಂಜಿಕೆ ಏನಿಲ್ಲ ಕಣೇ..... ಎಲ್ಲವೂ ಪ್ರಕೃತಿ ಸಹಜ. ಈ ಮಹಾ ಸಮುದ್ರವನ್ನು ನೋಡು. ಅದು ನಮ್ಮ ಜೀವ ಸಮುದ್ರವನ್ನೇ ಅನೇಕ ರೀತಿಯಲ್ಲಿ ಪ್ರತಿನಿಧಿಸುತ್ತದೆಯಲ್ಲ....” “ ಅಯ್ಯೋ.... ನನಗೆ ಅದೆಲ್ಲ ಅರ್ಥವಾಗೋಲ್ಲ ಬೇಡಾಂದೆನಲ್ಲಾ....ಈ ಸಮುದ್ರದಲ್ಲಿ ಅದೇನು ರುದ್ರ ರಮಣೀಯ ಸೌಂದರ್ಯವೋ ಏನೋ ರೀ.... ಅದರ ಬಿಟ್ಟೂ ಬಿಡದೆ ಅಳೆತ್ತರಕ್ಕೂ ಏರಿ ಬರುವ ದಡಕ್ಕೆ ಅಪ್ಪಳಿಸುವ ಅಲೆಗಳ ಅಬ್ಬರ ಕಂಡರೆ ಸಾಕೂರೀ....ನಂಗೆ ಏದುಬ್ಬುಸ ಬರುತ್ತೇರಿ.....”

ಈ ಬದುಕಿನಲ್ಲಿ ನನ್ನನ್ನು ಯಾರೋ ಆವರಿಸಿಕೊಂಡು ಹತ್ತಿಕ್ಕಿಂದಂತೆ ಭಾಸವಾಗುತ್ತದೇರಿ...... ಸಾವು ಇಲ್ಲೆ ಹತ್ತಿರದಲ್ಲಿ ಇದೆಯೇನೋ ಅನ್ನಿಸುತ್ತದೆ. ಏಳ್ರಿ ಇಲ್ಲಿಂದ ಮೊದಲು ಹೋಗೋಣಾ..... ಒಂದೇ ಸಮನೇ ಪ್ರಲಾಪಿಸಿದಳು. ಮಹೇಶನ ಉತ್ಸುಕತೆಯಿಂದ ಕೂಡಿದ ಮನಸ್ಸು ಧಸಕ್ಕನೆ ಕುಸಿದು ಹೋಗಿತ್ತು. ಅವನು ತಲೆ ಮೇಲೆ ಕೈಹೊತ್ತು ಕುಳಿತು ಬಿಟ್ಟ. ಅವಳೆಂದಂತೆ ಈಗಿಂದೀಗಲೇ ಈ ಮಹಾ ಸಾಗರದ ಭೂತಾಕಾರದಲೆಯೊಂದು ಭೀಕರವಾಗಿ ನಮ್ಮಿಬ್ಬರನ್ನೂ ಒಟ್ಟಿಗೇನೆ ಅಪ್ಪಳಿಸಿ ಅದಕ್ಕಿಂತಲೂ ಸೆಳೆದುಕೊಂಡು ಹೋಗಬಾರದೇ ಅನ್ನಿಸಿತ್ತು. “ ರೀ ಏಳಿಪ್ಪ, ನಂಗೆ ಹೇಗ್ಹೇಗೋ ಆಗುತ್ತೇ.... ಹೋಗೋಣಾ ರೂಮ್ ಗೆ.... ಐಸ್ ಕ್ರೀಂ ಕೊಡಿಸುತ್ತಿರಾ ....” ಅವಳೆಂದಳು. ಮಹೇಶ ಏಳಲಾರದೇನೆ ಎದ್ದು ಹೊರಟ. “ ನಿನ್ನದು ಶುದ್ದ ಮಗುವಿನ ಸ್ವಭಾವ ” ಅಂದ. “ ಯಾಕ್ರಿ, ನಾನೇನು ಮಗುವಲ್ಲ.... ಬೇಕಾದ್ರೆ ನಿಮಗೋಂದು ಮಗು ಹೆತ್ತು ಕೊಡ್ತಿನಿ ” ಅಂದಳು ! ಮಹೇಶ ದಿಗ್ ಭ್ರಾಂತನಾದ. ಮೂರು ದಿಕ್ಕಿನೆಡೆ ಆವೃತವಾದ ಜಲಧಿಯನ್ನು ನಿಟ್ಟಿಸುತ್ತಾ ಮತ್ತೆ ಹಾಗೆ ನಿಂತ. “ ನಡೀರಿ.....ಅವಳು ರಟ್ಟ ಹಿಡಿದೆಳೆದುಕೊಂಡು ಹೊರಟಳು.” ಅವನಿಗೆ ಧುತ್ತನೆ ಸಂಧ್ಯಾ ಸ್ಮೃತಿಗೆ ಬಂದಳಲ್ಲ... ಛೇ ಈವತ್ತು ತನಗಿದ್ದ ಮೂಡಿನಲ್ಲಿ ಅವಳು ಜತೆಗೆ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು. ಒಳ್ಳೆ ಕಂಪೆನಿ ಕೋಡೋಳು. ಭಾವನಾತ್ಮಕವಾಗಿ ಹಾಗೂ ತಾನು ಸ್ವಲ್ಪ ಮನಸ್ಸು ಮಾಡಿದ್ದಿದ್ದರೆ ದೈಹಿಕವಾಗಿಯೂ... ಹೀಗೆಂದು ಕೊಂಡವನೇ ಬೀಚಿನ ಮರಳಿನ ಮೇಲೆ ಸ್ವಲ್ಪ ದೂರ ಹೆಂಡತಿಯೊಂದಿಗೆ ಹೆಜ್ಜೆ ಹಾಕಿದನೋ ಇಲ್ಲವೋ ಎದುರಿಗೆ ಬರುತ್ತಿರುವ ಹೆಣ್ಣೋಬ್ಬಳು ಅವನ ಗಮನ ಸೆಳೆದಿದ್ದಳಲ್ಲ... ಅವಳ ನಡಿಗೆ, ಬಳುಕುವ ಮೈಮಾಟವೆಲ್ಲ ತನಗೆ ತೀರ ಪರಿಚಿತವೆನ್ನಿಸುತ್ತಿದೆಯೆಲ್ಲ. ತನಗೆ ತೀರ ಆಪ್ತಳಾದಂತೆ ಕಾಣಸಿಗುತ್ತಿರುವಳಲ್ಲ... ಹೌದು, ಅವಳು ಸಂಧ್ಯಾ !ತನ್ನ ಕಣ್ಣು ತನಗೆ ಮೋಸ ಮಾಡಲಾರವು. ಎಂದಿಲ್ಲದ ಹುಮ್ಮಸ್ಸಿನಿಂದ ಒಮ್ಮೆಲೆ ಜೀಗಿಯುತ್ತಾ ಅವಳೆಡೆಗೆ ಧಾವಿಸಿದ್ದಾನೆ....

“ ಸಂಧ್ಯಾ ! ನೀನು ಇಲ್ಲಿ... ? ”

“ ಮಹೇಶ ! ನೀನು ಇಲ್ಲಿ..... ? ”

ಇಬ್ಬರ ಕಣ್ಣುಗಳಲ್ಲಿ ಒಲವಿನ ಸಮುದ್ರವೇ ಉಕ್ಕಿ ಉಕ್ಕಿ ಹರಿಯುತ್ತಿತ್ತು.

ಕ್ಷಣಗಳೇ ಮಾತುಗಳು ಹೊರಡದಾದವು.

ಪಕ್ಕದಲ್ಲೆ ಇದ್ದ ಸುಲಕ್ಷಣಾ ವಿಲಕ್ಷಣಾ ಕಾತರದಿಂದಲೇ ಸ್ತಬ್ದಳಾಗಿದ್ದಳು. “ಮಹೇಶ ಎಷ್ಟು ವರ್ಷಗಳಾದವಲ್ಲ... ನಿಮ್ಮ ಭೇಟಿಯಾಗಿ ? ನಾನು ನಿಮಗಾಗಿ ಹುಡುಕದ ಸ್ಟುಡೀಯೋ, ಆರ್ಟಗ್ಯಾಲರಿ, ಅಷ್ಟೇಕೆ ಯಾವೋದು ಜಾಗವನ್ನು ನಾನು ಬಿಟ್ಟಿಲ್ಲ... ” ಸಂಧ್ಯಾ ಒಂದೇ ಉಸುರಿಗೆ ಹೇಳಿದಳು.

“ ನಾನು ಅಷ್ಟೇ..... ಸಂಧ್ಯಾ ” ಅವನೆಂದ ಚುಟುಕಾಗಿಯೇ. ಆದರೂ ಅ ದನಿಯಲ್ಲಿ ಅತೀವ ಮಾರ್ದವತೆ ಇತ್ತು.

“ನೀವು ನನ್ನನ್ನು ಮರೆತುಬಿಟ್ಟಿರೇನು ಅಂದುಕೊಂಡೆ ” ಎಂದಳು

“ ಏನು ಮಾಡುವುದು ಹೇಳಿ.... ನಿಮ್ಮಪ್ಪನ ಶ್ರೀಮಂತಿಕೆ ಅಟ್ಟಹಾಸದ ಮುಂದೆ .... ನಾನು ಎಲ್ಲವನ್ನೂ ಮರೆಯಬೇಕೆನಿಸಿತ್ತು. ಆದರೆ, ನಾನು ನಾನಾಗಿ ಉಳಿಯಲಿಲ್ಲ... ” ಅವನು ಭಾವಪರವಶನಾಗುತ್ತಿದ್ದಂತೆಯೇ, ಇವರಿಗೇನಾಗಿದೆ ದಾಢಿ. ಚೆನ್ನಾಗಿಯೇ ಇದ್ದಾರಲ್ಲ....ನಂಜೊಂತೆ ಏನೂ ಉಳಿದಿಲ್ಲವೇ ಇವರಿಗೆ....ತುಟಿ ಕಚ್ಚಿ ತನ್ನೊಳಗೆ ಗೊಣಗಿದಳು ಸುಲಕ್ಷಣಾ. ಪಕ್ಕದಲ್ಲಿ ಅಪರೂಪದ ಚೆಲುವೆ ಹೆಂಡತಿಯೊಬ್ಬಳಿದ್ದಾಳೆ ಎನ್ನುವುದನ್ನೂ ಮಹೇಶ ಮರೆತಿದ್ದ. ಅವನು ತದೇಕ ಚಿತ್ದದಿಂದ ಸಂಧ್ಯಾಳನ್ನು ನಿಟ್ಟಿಸಿದ್ದ. ತನ್ನ ಕಣ್ಣುಗಳಲ್ಲೆ ತುಂಬಿಕೊಂಡ.

ಅವಳೂ ಅರೆ ಕ್ಷಣ ಅವನನ್ನು ತನ್ನ ಬಟ್ಟಲು ಕಣ್ಣಗಳಲ್ಲಿ ಬಿಂಬಿಸಿಕೊಂಡಳು. ಎಂದೋ ಗತಿಸಿ ಹೋದ ದಿನಗಳ ಸ್ಮೃತಿಯಲ್ಲಿ ಕಳೆದುಹೋದಳು.

“ ಏನ್ರಿ ಯಾರಿವರು...? ನನಗೆ ಹೇಳಬಾರದೇನು ” ಕೇಳಿದಳು ಸುಲಕ್ಷಣಾ.

“ ಇವರು ಸಂಧ್ಯಾ ಅಂತ ಒಳ್ಳೆ ಆರ್ಟಿಸ್ಟ್ ನನ್ನೊಂದಿಗೆ ಇದ್ದ ಸಹ ಕಲಾವಿದೆ. ನನಗೆ ಒಳ್ಳೆ ಸ್ನೇಹಿತೆಯೂ ಆಗಿದ್ದಳು...” ಮಹೇಶನೆಂದ. “ ಮಹೇಶ್ ಇವರು ನಿಮ್ಮ .....”

“ ಆ, ಹೂಂ, ನನ್ನ ಹೆಂಡತಿನೇ.... ಹೆಸರು ಸುಲಕ್ಷಣಾಂತ, ಇವಳು ಬಹಳ ಒಳ್ಳೆಯವರು... ನನ್ನ ದೇಹದ ಗೆಳತಿ ಅನ್ನೊಂದಕ್ಕಿಂತಲೂ ಜೀವದ ಗೆಳತಿ ...” ಮಹೇಶನ ದನಿಯಲ್ಲಿ ಅಸಹನೆ ಹೊಗೆಯಾಡಿತ್ತು.

“ ಏನ್ರಿ ಮಹೇಶ್ ಹಾಗಂದ್ರೆ....ನಿಮ್ಮ ಹೆಂಡತಿ ನಿಮಗೆ ಮಾತ್ರ ಜೀವದ ಗೆಳತಿಯೇನು ? ನನ್ನ ಎದುರಿಗೆ ನೀವು ಹೀಗೆ ಹೇಳಿದರೆ ಆಕೆ ಏನು ತಿಳಿದುಕೊಳ್ಳೋದಿಲ್ಲ...”

“ ಇನ್ನೇನು ನೇರವಾಗಿ ಹೇಳ್ಬೇಕೂಂದ್ರೆ ನೀವು ಅವರ ದೇಹದ ....”

“ ಛೀ, ಏನು ಮಾತೂಂತ ಆಡ್ತೀರಿ.... ನಿಮ್ಮ ಗಂಡ ಎಂದಾದರೂ ಹಾಗೆ ಹಾಗುವುದು ಉಂಟೇನು ? ಆತ ತೀರ ಅಪರೂಪದ ಮನುಷ್ಯ. ಅವರನ್ನು ಗಂಡನನ್ನಾಗಿ ಪಡೆದ ನೀವು ಪುಣ್ಯವಂತೆ....”

“ ಓಹೋ..... ನಾನು ಎಂಥ ಮಾತಾಡಿಬಿಟ್ಟೆ....! ನಿಮ್ಮಿಬ್ಬರಿಗೂ ಜಗಳ ತಂದಿಟ್ಟೆನಲ್ಲ.... ನಾನೆಂಥ ಅಪರೂಪದ ಮನುಷ್ಯನೋ..... ” ಮಹೇಶ ಕೈ ಕೈ ಹಿಸುಕಿಕೊಂಡ . “ ನಾವು ಬಹಳ ದಿನಗಳ ಮೇಲೆ ಭೇಟಿಯಾಗಿದ್ದೇವೆ.... ಬನ್ನಿ ನಮ್ಮ ಮನೆಗೆ ಹೋಗೋಣ.... ನಿಮಗೆ ಈ ಮಹಾನಗರದ ದರ್ಶನ ನಾನು ಮಾಡಿಸುತ್ತೇನೆ.... ಬನ್ನಿ ಇಲ್ಲವೆನ್ನಬೇಡಿ ಮಹೇಶ್... ! ” ಸಂಧ್ಯಾ ಯಾಚಕ ದನಿಯಲ್ಲೆಂದಳು.. ಇದೀಗ ಅವಳನ್ನು ನಖಶಿಖಾಂತ ನಿಟ್ಟಿಸಿದ್ದಾಳೆ ಸುಲಕ್ಷಣಾ.

ಜೀನ್ಸ್ ಪ್ಯಾಂಟ್ ಅವಳ ತುಂಬು ತೊಡೆಗಳನ್ನು ಬಿಗಿದು ಬಂಧಿಸಿತ್ತು. ಮೇಲೋಂದು ತುಸು ದೊಗಳೆಯಾದ ಹಳದಿ ಟೀ ಷರ್ಟ್....ಉಬ್ಬಿದೆದೆಯ ಲಾಸ್ಯವನ್ನು ಸ್ಪಷ್ಟಪಡಿಸಲು ತವಕಿಸಿತ್ತು. ದುಂಡು ಮುಖದಲ್ಲಿ ಕೆಂದಾವರೆಯ ಚೆಲುವು ಸುಗಂಧಿತ ಪರಿಮಳ ಪೂಸಿಕೊಂಡು ಇಮ್ಮಡಿಸಿತ್ತು. ಒಟ್ಟಿನಲ್ಲಿ ತನ್ನಲ್ಲಿ ಇಲ್ಲದಿರುವುದೆನೊ ಅವಳಲ್ಲಿದೆ ಎಂಬ ಅಸೂಯೆ ಅದಾಗಲೇ ಸುಲಕ್ಷಣಳ ಮನಸ್ಸಿನ ಮೂಲೆಗೆ ಲಗ್ಗೆ ಹಾಕಿಯೇ ಬಿಟ್ಟಿತ್ತು.

“ ಬೇಡಾರಿ, ಇನ್ಯಾವಾಗಲಾದರೂ ಬರೋಣ..... ಈಗ ನಾವು ಹೋಗ್ತಿವಿ... ” ಅಂದಳು ನಾಟಕೀಯವಾಗಿ ಸುಲಕ್ಷಣಾ.

“ ನನ್ನ ಕಂಡ್ರೆ ನಿಮಗೆ ಆಗೋಲ್ಲವೇನು..... ನಾನೇನೂ ಅಂಥಾ ಮೋಡಿ ಮಾಡಲಿಕ್ಕೆ ಆಗಲಿಲ್ಲವಲ್ಲಪ್ಪ ನಿಮ್ಮ ಯಜಮಾನರಿಗೆ...ನಾನು ಆಗಲೇ ಹೇಳಿದೆನಲ್ಲ ಆತ ತೀರ ಅಪರೂಪದ ಸಂಭಾವಿತ ವ್ಯಕ್ತಿ.... ಇನ್ನೂ ಏನೂಂತ ಬಿಡಿಸಿ ಹೇಳಲಿ... ” ಸಂಧ್ಯಾ ಮಹೇಶ್ ನೊಡನೆ ಅಂಥ ಸಂಬಂದವಿಲ್ಲವೆಂಬುದನ್ನು ಸೂಚ್ಯವಾಗಿ ಹೇಳಿದಳು.

“ ಸಂಧ್ಯಾ ನೀನು ಇನ್ನೂ ನನ್ನನ್ನು ಹೊಗಳುವುದನ್ನು ಬಿಟ್ಟೆ ಇಲ್ಲವಲ್ಲ... ಹೇಗೆ ಬಿಡಲಿಕ್ಕಾಗುತ್ತೆ ಹೇಳಿ....ನೀವು ಏನಾದರೋಂದು ಪ್ರಮಾದ ಮಾಡಿಬಿಡಿ ಸಾಕು ಆಮೇಲೆ ನೋಡೋಣ.... ” ಎಂದು ಹುಬ್ಬು ಹಾರಿಸಿ ಕುಲುಕುಲನೆ ನಕ್ಕಳು.

ಆ ನಗೆಯಲ್ಲಿ ಅತೀವ ಜೀವಸಂಚಲನವಿದೆ ಅನ್ನಿಸದಿರಲಿಲ್ಲ ಮಹೇಶನಿಗೆ.

ಎಲ್ಲಿ ಅಂಥ ಒಂದೇ ಒಂದು ನಗೆ ನನ್ನವಳಾದ ಸುಲುವಿನಲ್ಲಿ ....... ? “ ಯಾಕೆ !! ನನ್ನ ಮಾತು ನಿಮಗೆ ಹರ್ಟ್ ಮಾಡಲಿಲ್ಲ ತಾನೇ ಮಹೇಶ..... ”

“ ಓಹ್ ! ಹಾಗೆನಿಲ್ಲ ......”

“ ಸರಿ ಮತ್ತೆ – ಬನ್ನಿ ದಂಪತಿಗಳಿಗೆ ನಮ್ಮ ಸೇವೆಗೂ ಸ್ವಲ್ಪ ಅವಕಾಶ ಮಾಡಿಕೊಡಿ ಮಾರಾಯ್ರೆ.... ”ಕೃತಕ ದನಿ ತೀಡಿದಳು ಸಂಧ್ಯಾ .

ಮಹೇಶ ಹೆಂಡತಿಯೊಡಗೆ ದೀನ ನೋಟ ಹರಿಸಿದ್ದಾನೆ.

ಅವನಿಗೂ ತನ್ನ ಆಪ್ತ ಗೆಳತಿಯ ಬಂಗಲೆಗೆ ಹೋಗುವ ಉತ್ಕಟೇಚ್ಛೆ.

ಅವಳೊಡನೆ ಸ್ಪಲ್ಪ ಹೊತ್ತಾದರೂ ಕಳೆಯುವ ಅದಮ್ಯ ಬಯಕೆಯೆ. ಸಂಧ್ಯಾ ಈದೀಗ ಸುಮ್ಮನಿರಲಾಗದೇ, “ ರೀ ಮೇಡಂ, ಅಪ್ಪಣೆ ಕೊಡ್ಸಿ.... ನಾನೇನು ನಿಮ್ಮ ಪತಿದೇವರ ಪ್ರೀತಿಯಲ್ಲಿ ಪಾಲು ತಗೋಂಡೋಳಲ್ಲ..... ಈಗ ತಗಳೋದು ಇಲ್ಲ....” ನಮ್ಮಲ್ಲಿ ಪ್ರೀತಿ ಅಂತ ಇರೋದೆ ಆದ್ರೆ, ಅದಕ್ಕೆ ಬೇರೆಯೆದೆ ಆದ ಅರ್ಥವಿದೆ.... ಅಲ್ವಾ ಮಹೇಶ... ಪುನಃ ಲಘುವಾಗಿ ಕಣ್ಣು ಮಿಟುಕಿಸಿದಳು ಸಂಧ್ಯಾ. “ ಹೌದು ಸುಲು.... ಇಲ್ಲವೆನ್ನಬೇಡಾ... ಅವಳೂ ಈಗ ಮದುವೆ ಆಗಿದ್ದಾಳೆ. ಅವಳ ಬಗ್ಗೆ ಏನನ್ನೂ ನಾವು ಕೇಳಲಿಲ್ಲ....ಅವಳೇಕೋ ಎಂದಿನಂತಿಲ್ಲ ನಾವು ಅಲ್ಲಿಗೆ ಹೋಗುವುದರಿಂದ ಅವಳಿಗೊಂದಿಷ್ಟು ಸಮಧಾನ ಆಗೋದಾದ್ರೆ ಆಗಲಿ.... ಇಲ್ಲವೆನ್ನಬೇಡ...”

ಸುಲಕ್ಷಣಾ ಮತ್ತೋಮ್ಮೆ ಸಂಧ್ಯಾಳತ್ತ ಪರೀಕ್ಷಕ ನೋಟ ಹರಿಸಿದ್ಗಾಳೆ. ಅವಳ ನಿರ್ಮಮಕಾರ ನೋಟಕ್ಕೆ ಸೋತಿದ್ದಾಳೆ. ತಲೆಯಾಡಿಸಿದ್ದಾಳೆ. ಸಂಧ್ಯಾ ಬೀಚಿಗಂಟಿಗೊಂಡಂತೆಯೆ ಇದ್ದ ಕಾರ್ ಪಾರ್ಕಿಂಗ್ ಕಡೆ ನಡೆದಿದ್ದಳು. ಗಂಡ ಹೆಂಡತಿ ಇಬ್ಬರೂ ಅವಳನ್ನೆ ಹಿಂಬಾಲಿಸಿದರು.

ಸಂಧ್ಯಾ ಕಾರ್ ನಲ್ಲಿ ಕುಳಿತಳು. ಸ್ಟೀರಿಂಗ್ ವೀಲ್ ಹಿಡಿದಳು. ಹಿಂದಿನ ಸೀಟಿನತ್ತ ನೋಡಿದಳು. ಮಹೇಶ ತನ್ನ ಮಡದಿಯೊಂದಿಗೆ ಕುಳಿತಿದ್ದ. ಅವಳು ಇನ್ನೂ ಬಿಗುವಿನಲ್ಲೆ ಇದ್ದಂತಿದ್ದಳಲ್ಲ.... ನೋಡಿ ನಕ್ಕಳು ಸಂಧ್ಯಾ. ಹೊಸತನದ ಹಂಬಲಕ್ಕೇನೂ ತುಡಿಯದ ಹೆಣ್ಣು. ಹೊಸ ಹಸಿವು ಬಯಕೆಗಳಿಗೇನೂ ತುಮುಲವಿಲ್ಲದ ಹೆಣ್ಣು, ನಗರ ನಾಗರಿಕತೆ ಆಧುನಿಕತೆಯ ಸೊಂಕಿಲ್ಲದ ಹೆಣ್ಣು . ಗಂಡು ಹೆಣ್ಣಿನ ಸ್ನೇಹ ಸಂಬಂದಗಳಿಗೂ ಹೊಸದೊಂದು ಅಯಾಮವಿದೆಯೆಂದರಿಯದ ಮುಗ್ಧೆ ಇವಳು... ಅವಳು ನಕ್ಕ ನಗು ಮಹೇಶನಿಗೆ ಕಾರ್ ಸ್ಟಾರ್ಟ್ ಮಾಡುವುದರೋಂದಿಗೆನೆ ಕೇಳಿಸದಿರಲಿಲ್ಲ.

“ ಯಾಕೆ !... ಯಾಕೆ ನಗುವೆ ಸಂಧ್ಯಾ ... ನಮ್ಮನ್ನು ನೋಡಿ ನಗೆ ಬರುತ್ತಿದೆಯೇ ನಿನಗೆ ? ” ಅಂದ ಕೆಳದನಿಯಲ್ಲೆ. “ ಇಲ್ಲ ಇಲ್ಲ ... ನಿನ್ನಾಕೆಯಲ್ಲೆ ನಿನ್ನನ್ನು ಕಲ್ಪಿಸಿಕೊಂಡೆನಷ್ಟೇ...” ಎಂದೇನೋ ಒಗಟಾಗಿ ಹೇಳಿದಳಲ್ಲ.... ಸುಲಕ್ಷಣಾ ಸ್ಪಲ್ಪ ಚುರುಕಾಗಿ ಹೇಳಿದಳು.

“ ನಾನೊಂದು ಮಾತು ಹೇಳಲೇನು ? ”

“ ಓಹ್ಹೊ... ಬೈ ಆಲ್ ಮೀನ್ಸ್.. ಯಾಕೆ! ಯಾಕೆ ಸಂಕೋಚ .....? ” ನಾನು ನೋಡಿ ಮನಸ್ಸಿಗೆ ಬಂದುದನ್ನು ತಕ್ಷಣ ಹೇಳಿಬಿಡೋದೇ...ಸಂಧ್ಯಾ ಕಾರ್ ವಿಲ್ ಹಿಡಿದೇ ಹಿಂದಿರುಗೊಮ್ಮೆ ದಿಟ್ಟಿಸಿದಳು. “ ಅಲ್ಲಾ ನೀವಿನ್ನೇನು, ಆವಾಗಲಿಂದ ನೋಡ್ತಾನೆ ಇದ್ದೀನಿ... ನೀವು ನಿಮ್ಮನ್ನ ಮಹೇಶನಲ್ಲಿ ಕಲ್ಪಿಸಿಕೊಂಡೂ....” ಅನ್ನಬೇಕೇ ಅವಳು.

“ ಓಹ್ ! ನೀನಿಷ್ಟು ಜಾಣೆಯಾವಾಗ ಆದೆಯೆ...” ಮಹೇಶನೆಂದರೆ, “ ಅಷ್ಟೆ ಅಲ್ಲಾರೀ, ನೀವೂ ಏನು ಕಡಿಮೆ ಇಲ್ಲವಲ್ಲ... ನಿಮ್ಮನ್ನು ಆಕೆಯಲ್ಲಿ ಕಲ್ಪಿಸಿಕೊಂಡಿಲ್ವೇನೂ... ” ಸುಲಕ್ಷಣ ಮತ್ತೆ ಛೇಡಿಸುತ್ತಿದ್ದಂತೇನೆ, ಮಹೇಶ ತಟ್ಟನೆ ಅವಳ ತೊಡೆಯನ್ನು ಚಿವುಟೇ ಬಿಟ್ಟಿದ್ದ. ಅವನ ಸುಲು ‘ಹಾಯ್ ’ ಎಂದು ಸಣ್ಣಗೆ ನರಳಿದಾಗ, “ ಪರವಾಗಿಲ್ಲರೀ ಮಹೇಶ ! ನಾನೇನೋ ಅನ್ಕೋಂಡಿದ್ದೆ.... ನಿಮ್ಮ ಹೆಂಡತೀನಾ... ”ಸಂಧ್ಯಾ ಚಕಿತಳಾಗಿಯೆ ಹೇಳಿದಳು. ಅನಂತರ, ಯಾರಲ್ಲೂ ಮಾತು ಮೊಳೆಯಲಿಲ್ಲ. ಸಂಧ್ಯಾ ಮುಂಬೈ ವಿಲೇ ಪಾರ್ಲೆಯಲ್ಲಿರುವ ತನ್ನ ಬಂಗಲೆಯ ಮುಂದೆ ಕಾರು ನಿಲ್ಲಿಸಿದಳು. ಗೂರ್ಖಾ ಬಂದು ಗೇಟ್ ತೆರೆದಿದ್ದ. ಕಾರು ಒಳಗೆ ಬರುತ್ತಿದ್ದಂತೇನೇ ಹೊಸ ಅತಿಥಿಗಳನ್ನು ಸ್ವಾಗತಿಸಿ ಸಲಾಮು ಹೊಡೆದಿದ್ದಾನೆ. ಸುಲಕ್ಷಣಾ ಆ ಬಂಗೆಲೆಯೊಳಗೆ ಕಾಲಿಡುತ್ತಿದ್ದಂತೆ ನಿಬ್ಬೆರೆಗಾದಳು. ಸಿನಿಮಾಗಳಲ್ಲಿ ನೋಡಿದ ದೃಶ್ಯ ! ಇದೀಗ ಕಣ್ಮುಂದೆಯೇ. “ ನೋಡಿ, ನೀವು ಈ ರೂಮ್ ನಲ್ಲಿ ಇರಬಹುದು. ಮತ್ತೆ ಮುಖ ತೊಳೆದು ಬನ್ನಿ. ಕಾಫಿ ಕುಡಿಯುವಿರಂತೆ ” ಸಂಧ್ಯಾ ಅಂದಳು. ದಂಪತಿಗಳಿಬ್ಬರು ಅವಳು ತೋರಿಸಿದ ರೂಂ ಸೇರಿದರು. ಅಟ್ಯಾಚಡ್ ಬಾತ್ ಹೊಂದಿರುವ ಸುಸಜ್ಜಿತ ಕೋಣೆಯದು. ಅಲ್ಲೇ ಇದ್ದ ಕುರ ಲಾನ್ ಡಬ್ಬಲ್ ಬೆಡ್ ಮೇಲೆ ಕುಳಿತು ಕೊಂಚ ವಿರಮಿಸಿಕೊಂಡರು. ಸುಲಕ್ಷಣಾಳ ಮಿದುಳಿನಲ್ಲಿ ಸಂಶಯ ಕೀಟ ಕೊರೆಯುತ್ತಿದೆ. ಈ ಕಲಾವಿದರ ಜೀವನವೇ ಹೀಗೇನೋ... ಇವರಿಗೆ ಯಾರು ಯಾರೋ ಸ್ನೇಹಿತರು. ಅವರಲ್ಲಿ ಶ್ರೀಮಂತರು ಬೇರೆ. ಅವರ ವೈಭವವೋ.. ಅವರ ಅವರೊಡನೆ ಏನೇನೋ ಸಂಬಂಧಗಳೋ ವ್ಯವಹಾರಗಳೋ... ಸುಲಕ್ಷಣ ಯೋಚಿಸುತ್ತಲೇ ಇದ್ದಾಳೆ. “ ಬನ್ನಿ ಬನ್ನಿ ಕಾಫಿ ಕುಡಿಯೋಣ....” ಸಂದ್ಯಾ ಬಂದು ಕರೆದಳು, “ ಮನೆಯಲ್ಲಿ ಯಾರೂ ಇಲ್ಲವೇನು...ನೀನು ಒಬ್ಬಳೆ ಇರೋ ಹಾಗಿದೆ ... ? ” ಮಹೇಶ ಕೇಳಿದ. ಅವಳು ನಸುನಕ್ಕಳು. “ ಹೌದು, ಯಾರೂ ಇರಲಿಲ್ಲವಲ್ಲ....” ನೀವು ಈಗ ಬಂದಿರಲ್ಲಾ... ಒಂದಿಷ್ಟು ಬೇಸರ ಕಳೆಯುತ್ತೇ... ಮನಸ್ಸಿಗೂ ಎಷ್ಟೋ ಹಗುರವಾಗುತ್ತೆ ಅಲ್ವಾ.... “ ಅವಳೆಂದಳು. “ ಯಾಕೆ ! ನಿಮ್ಮ ಯಜಮಾನ್ರು ಎಲ್ಲಿಗೆ ಹೋಗಿದ್ದಾರೆ? ” ಸುಲಕ್ಷಣಳ ಪ್ರಶ್ನೆ. “ ಓಹ್ ! ಈಗ ನಮ್ಮೆಜಮಾನ್ರು ವಿಷಯ ಹೇಳ್ತಾ ಹೋದರೆ ಮುಗಿಯೋದಿಲ್ಲ... ಅದು ಇನ್ನೊಂದ್ಸಲ ಹೇಳ್ತೀನಿ... ಮೊದ್ಲು ಕಾಫಿ ಕುಡಿರೀ. ”

ಸಂಧ್ಯಾ ಸುಖಿಯಾಗೇನೂ ಇಲ್ಲ. ಅವಳೂ ನೊಂದಿದ್ದಾಳೆ. ಅವಳನ್ನೇ ನೋಡುತ್ತಾ ಮಹೇಶ ಕಾಫಿ ಗುಟುಕರಿಸುತ್ತಿದ್ದರೆ ಸುಲಕ್ಷಣಾಳಿಗೇನೋ ಕಸಿವಿಸಿ, ಅದನ್ನು ಮನಗಂಡವಳಂತೆ ಸಂಧ್ಯಾ, “ ನಾನು ಬರ್ತೀನಿ ಸ್ವಲ್ಪ ಕೆಲಸವಿದೆ.... ರಾತ್ರಿ ಊಟಕ್ಕೆ ಏನು ಮಾಡ್ಬೇಕು ಹೇಳಿ ಬಿಡಿ. ಸಂಕೋಚಬೇಡ. ” ನೀವು ಏನು ಮಾಡುತ್ತೀರೋ ಮಾಡಿ... ನಮಗಾಗಿ ಸ್ಪೆಷಲ್ ಅರೇಂಜ್ ಮೆಂಟ್ ಏನೂ ಬೇಡಾ... ಸುಲಕ್ಷಣ ತಟ್ಟನೆ ಹೇಳಿದಳು. “ ಮಹೇಶ, ಯಾಕೆ ! ನಿಮ್ಮ ಹೆಂಡತಿ ತುಂಬಾ ಗರಮ್ ಆಗಿದಾರೆ... ” ಎಂದೇ ಬಿಟ್ಟಳು. “ ಅವಳನ್ನೇ ಕೇಳಿದರೆ ಗೊತ್ತಾಗುತ್ತೇ....”

“ ಹಾಗಂತೀರ ...”

“ ನನಗೇನೂ ಆಗಿಲ್ಲ... ನಾನ್ ಕೂಲ್ ಆಗೇ ಇದ್ದೀನಿ.... ಮೇಡಂ ” ಸುಲಕ್ಷಣ ಜೋರಾಗೇ ಹೇಳಿದಳು.

“ ಓಹೋ ಮೇಡಂ ಗೀಡಂ ಅವೆಲ್ಲ ಮರ್ಯಾದೆ ಬೇಡಾ .... ಸಂಧ್ಯಾ ಅಂದ್ರೆ ಸಾಕು ”

“ ಆಯ್ತೂ ಬಿಡಿ. ನನ್ನನ್ನು ನೀವು ಸುಲಕ್ಷಣಾ ಅಂದ್ರೆ ಸಾಕು ”

“ ಈ ನೀವು ಅನ್ನೋ ಪದ ನಮ್ಮ ನಡುವೆ ಬೇಕಾಂತ.... ” ಮಹೇಶ ಮಧ್ಯೆದಲ್ಲಿ ಬಾಯಿ ಹಾಕಿದ. “ ಬೇಡಾ ಬೇಡಾ ಖಂಡಿತ ಬೇಡಾ ಅಲ್ವಾ - ಸುಲಕ್ಷಣಾ....”ಕಣ್ಣು ಮಿಟುಕಿಸಿದಳು ಸಂಧ್ಯಾ ಸುಲಕ್ಷಣಳತ್ತಲೇ... ಸುಲಕ್ಷಣಾಳಿಗೆ ಏನೂ ತೋಚದಂತೆ ಕುಳಿತಳು. “ ಸಂಧ್ಯಾ ನಮ್ಮಿಬ್ಬರನ್ನು ಈ ದೊಡ್ಡ ಬಂಗಲೆಯಲ್ಲಿ ಬಿಟ್ಟು ಹೊರಗೆ ಹೋಗ್ಬಿಡಬೇಡಾ...” ಮಹೇಶ. “ ಇಲ್ಲ ಇಲ್ಲ, ಅಂಥ ಸಂಧರ್ಭ ಬಂದರೆ ಹೇಳದೇ ಹಾಗೆ ಹೋಗಲಾರೆ ” ಮುಗುಳ್ನಗೆಯಲ್ಲೆಂದಳು.

ಹೆಣ್ಣಿನ ಸನಿಹದಲ್ಲಿ ಈಂಥದೊಂದು ನಗೆ ನೋಡನೇನೆ ಅದೆಷ್ಟೋ ದಿನಗಳಾಗಿವೆಯಲ್ಲ ಅನ್ನಿಸದಿರಲಿಲ್ಲ ಮಹೇಶನಿಗೆ.

ಸುಲಕ್ಷಣಾಳೋ ಎಂಥದೋ ಮೋಡಿ ಮಾಡುತ್ತಿದ್ದಾಳಲ್ಲ ಈ ಹೆಣ್ಣು ತನ್ನ ನಗೆಯಲ್ಲಿ ಎಂದು ಇನ್ನಷ್ಟು ಬಿಗಿದುಕೊಂಡಳು.

ಅವಳು ಅತ್ತ ಮರೆಯಾಗುತ್ತಿದ್ದಂತೇನೆ, “ಯಾಕೆ ! ಸುಲೂ ಒಂಥರಾ ಇದ್ದೀಯಾ... ಒಳ್ಳೆ ಹಳ್ಳಿ ಗುಗ್ಗು ತರಾ ಇರಬೇಡ್ವೇ....ಅವಳಿಗೂ ನನಗೂ ನೀನೂ ಅಂದುಕೊಂಡಿರುವ ಸಂಬಂಧವೇನೂ ಇಲ್ಲ ಕಣೇ ......” ಮೆಲ್ಲನೆ ಬಳಿಸ ಸಾರಿ ಉಸುರಿದ್ದ.

ರಾತ್ರಿ ಊಟ ಮಾತ್ರ ಹೆಚ್ಚೀನೂ ಮಾತಿಲ್ಲದೇ ಒಂದು ಥರಾ ಮೌನದಲ್ಲೇ ಡೈನಿಂಗ್ ಟೇಬಲ್ ಮುಂದೆ ಸಾಗಿತ್ತು. ಮೂವರಲ್ಲೂ ಪರಸ್ಪರ ನೋಟಗಳು ಘರ್ಷಣೆಗಿಳಿದಿವೆ. ಬಿಚ್ಚಿಡಲಾಗದೆಷ್ಟೋ ವಿಷಯಗಳಿವೆ: ರಹಸ್ಯಗಳೂ, ಸಮಸ್ಯೆಗಳೂ ಇವೆ ಎಂದೇ ಸಾರುತ್ತಿವೆ. ಮನಸ್ಸುಗಳು ಮುಕ್ತವಾಗಿ ತೆರೆದು ಕೊಳ್ಳದೇನೆ ಏನನ್ನೂ ಸಾಧಿಸಲಾಗದು. ಮಹೇಶ ಕೈ ತೊಳೆದು ತನಗೂ ತನ್ನ ಹೆಂಡತಿಗೂ ತೆರವಾಗಿದ್ದ ಕೋಣೆಗೆ ಹೋಗಿ ಸೇರಿಕೊಂಡ. ಸುಲಕ್ಷಣಳಿಗೆ ಸಂಧ್ಯಾ ಉಪಚಾರ ಮಾಡಿ ಬಡಿಸಲು ಮುಂದಾದಳು. ಅವಳು ಚಟಕ್ಕನೇ ಕೈ ತೊಳೆದು ಎದ್ದೇ ಬಿಟ್ಟಳಲ್ಲ....

ಸಂಧ್ಯಾ ತಾನು ಇವರನ್ನು ತನ್ನ ಮನೆಗೆ ಆಹ್ವಾನಿಸಿ ತಪ್ಪು ಮಾಡಿದೆನೆನೋ..... ಎಂದು ಚಡಪಡಿಸುವಂತಾಯಿತು. ಅವಳು ನೇರವಾಗಿ ಹೇಳಿಯೆ ಬಿಟ್ಟಳು. “ನೋಡು ಸುಲಕ್ಷಣಾ, ನಿನಗೆ ನನ್ನ ಮೇಲೆ ಸಿಟ್ಟಿದ್ದರೆ ನೇರವಾಗಿ ಜಗಳವಾಗಿಬಿಡು. ಊಟ ಮಾತ್ರ ಬಿಡ್ಬೇಡಾ....” ಸುಲಕ್ಷಣಾ ತಟ್ಟನೆ ಹುಬ್ಬೇರಿಸಿ ನೋಡಿದಳು. ಸರಸರನೇ ತಮ್ಮ ಕೋಣೆಗೆ ನಡೆದುಹೋದಳು. ಮಹೇಶ ಕಾಟಿನ ಮೇಲೆ ಅಂಗಾತನಾಗಿ ಮಲಗಿದ್ದ.

ಇವಳು ಬುಸುಗುಟ್ಟುತ್ತಾ ಬಂದವಳೇ, “ ಅಲ್ಲರೀ... ಇವಳ ಜತೆ ನಿಮ್ಮ ಸ್ನೇಹ ಎಷ್ಟು ವರ್ಷದಿಂದ ಇತ್ತು ? ನೀವು ಮುಂಬೈ ಅಂದರೆ ಪ್ರಾಣ ಬಿಡ್ತಾ ಇದ್ರಲ್ಲಾ ಇದಕ್ಕೇನಾ.... ” ಕೆಣಕಿದಳು. “ ಛೇ, ಛೇ, ಸ್ವಲ್ಪ ಕೂಲ್ ಆಗಿರ್ತೀಯಾ ಸುಲೂ.... ನಾವೀಗ ಅವಳ ಮನೆಯಲ್ಲಿ ಅತಿಥಿಗಳು ”

“ಯಾರಿಗೆ ಬೇಕಾಗಿದೆ ಅವಳ ಆತಿಥ್ಯ.... ? ”

“ ಏನ್ ಹಾಗಂದ್ರೆ ನಾನೂ ಅವಳೊಂದಿಗೆ... ನೀನು ತುಂಬಾ ಹಳೇ ಕಾಲದ ಹೆಂಗಸಿನಂತೆ ಆಡಬೇಡಾ.... ನಿನಗೆ ಇದೆಲ್ಲ ಅರ್ಥವಾಗ್ಬೇಕೂಂದ್ರೆ ಸ್ವಲ್ಪ ತಾಳ್ಮೆ ಸಂಯಮದಿಂದ ಕಾಯ ಬೇಕಷ್ಟೇ ತಿಳೀತಾ....” ಕನಲಿ ನುಡಿದ ಅವನು.

ಹೊರಗೆ ಸಂಧ್ಯಾ ಅದೆಲ್ಲಿ ಕೇಳಿಸಿಕೊಂಡಳೋ. ದಿಗ್ಗನೆದ್ದು ಕೋಣೆಯ ಚಿಲಕ ಹಾಕಿ ಬಿಟ್ಟ. ಪುನಃ ನಿಶ್ಚೇಷ್ಟಿತನಾದವನಂತೆ ಹಾಸಿಗೆಯಲ್ಲೇ ಹೊರಳಿಕೊಂಡ. ಶೂನ್ಯದತ್ತ ನೋಟವಿರಿಸಿದ. ಹಾಗೇ ನಿದ್ರೆ ಮಂಪರು ಹತ್ತಿದಂತೆ ಕಣ್ಣು ಮುಚ್ಚಿದ್ದ. ಸುಲಕ್ಷಣಾ ಅವನ ಕೋಪ ಕಂಡು ಕೊಂಚ ಸ್ತಬ್ದಳಾದಳು. ತೆಪ್ಪಗೆ ಅವನ ಮಗ್ಗುಲಿಗೆ ಬಂದು ತಾನೂ ಮಗ್ಗುಲಾದಳು. ಮಹೇಶನಿಗೆ ಗಂಟೆಗಳು ಸರಿಯುತ್ತಲೇ ಇದ್ದರು ನಿದ್ರೆ ಹತ್ತಿರ ಸುಳಿಯಲಿಲ್ಲ. ಅದು ಏಪ್ರಿಲ್ ತಿಂಗಳ ಉರಿ ಬಿಸಿಲ ಬೇಸಿಗೆ ಕಾಲ. ಹಗಲಿನ ತಾಪ ರಾತ್ರಿಗೂ ನುಸುಳಿ ತಿರುಗುವ ಫ್ಯಾನಿನ ಗಾಳಿಯೂ ಬಿಸಿಯನ್ನೇ ಬಿತ್ತುತ್ತಿರುವಾಗ ಸರಸಕ್ಕೆ ಬದಲಾಗಿ ವಿರಸಮುಖಿಯಾಗಿ ಕವುಚಿ ಮಗ್ಗುಲಾಗಿರುವಾಗ ತಾನಿನ್ನು ವಿಪರೀತ ಸೆಖೆಯಲ್ಲಿ ಕಾಲ ಕಳೆಯಲಾರನಲ್ಲ.... ಎದ್ದು ಕೋಣೆಯಿಂದ ಹೊರಗೆ ಬಂದಿದ್ದಾನೆ.

ಹೊರಗೆ ಚಾಚಿದ ವಿಶಾಲ ಬಾಲ್ಕನಿಯಲ್ಲಿ ನಡೆದು ಬಂದ ಮಹೇಶ ಅಲ್ಲೇ ಇದ್ದ ಈಸಿ ಚೇರಿನಲ್ಲಿ ಕುಳಿತು ಆಕಳಿಸುತ್ತಾ ಮೈಮುರಿದು ಒರಗಿಕೊಂಡ. ಎದುರಿಗೆ ಗಾಜಿನ ದೊಡ್ಡ ಕಿಟಕಿಯಲ್ಲಿ ಮುಂಬೈ ಮಾಯಾನಗರಿ ಕತ್ತಲೆಯಲ್ಲಿ ಮುಸುಕೆಳೆದುಕೊಂಡಿದ್ದರೂ ಧುಮುಗುಟ್ಟುತ್ತಿರುವಂತೆ ಅನತಿ ದೂರದಲ್ಲಿ ಇರುವ ಸಮುದ್ರದಲೆಗಳ ಮೊರೆತ ನಿರಂತರವಾಗಿರುವಂತೆ ಭಾಸವಾಗಿ ಇದೇನು ಜನ ಜೀವನವೋ ಇಲ್ಲಿ ನೀರವ ನಿಸ್ತಬ್ದತೆಯಲ್ಲೂ ರುದ್ರ ಗಂಬೀರತೆಯೆ ತಾಂಡವಾಡುತ್ತಿದೆ ಅನ್ನಿಸದಿರಲಿಲ್ಲ.....

“ ಯಾಕೆ ! ನಿದ್ರೆ ಬರಲಿಲ್ಲವೇ ? ಹೆಣ್ಣಿನ ಮೃದು ಮಧುರ ದನಿ ಕೇಳಿ ತಲೆ ಎತ್ತಿದ್ದ. ಎದುರಿಗೆ ಸಂಧ್ಯಾ ನಿಂತಿದ್ದಳು. ಹಳದಿ ಬಣ್ಣದ ತೆಳು ನೈಟಿಯಲ್ಲಿ ಅವಳ ಅಂಗಸೌಷ್ಟವ ಬಿಗಿಯಿಂದ ಹೊಮ್ಮಿ ಬೀಗುತ್ತಿದೆ! ಅರೆ ಕ್ಷಣ ಆ ದೃಷ್ಟಿಸುಖದಲ್ಲೆ ತನ್ನನ್ನು ಕಳೆದುಕೊಂಡವನಂತೆ ಮಹೇಶ ಗಲಿಬಿಲಿಗೊಂಡಿದ್ದ. ಅವಳು ಮೈ ಕುಲುಕಿಸಿ ತುಂಬು ಸ್ನೇಹದ ನಗೆ ನಕ್ಕಳು. “ ಇಲ್ಲ ನಿದ್ರೆ ಬರಲಿಲ್ಲ..... ನಿನಗೂ ಬರಲಿಲ್ಲಾಂತ ಕಾಣ್ಸುತ್ತೆ....”

“ ಇಲ್ಲ, ನಾನು ಅಷ್ಟೇ ಈ ಬಾಲ್ಕಾನಿಯಲ್ಲಿ ಕುಳಿತು ಎಷ್ಟೋ ರಾತ್ರಿ ಸುಮ್ಮನೆ ಹೊತ್ತು ಕಳೆದಿದ್ದೇನೆ.... ” ಎದುರಿಗೇ ಇದ್ದ ಇನ್ನೋಂದು ಈಸೀ ಛೇರಿನಲ್ಲಿ ಉಸ್ಸೆಂದು ಒರಗಿಕೊಂಡಳು.

ಮಹೇಶ ಮಾತು ಕಳೆದುಕೊಂಡವನಂತೆ ಅವಳೆಡೆಗೆ ನಿಟ್ಟಿಸಿದ್ದಾನೆ. ”ಅದೇಕೋ ರಾತ್ರಿಯ ಏಕಾಂಗಿತನ ಒಗ್ಗಿ ಹೋಗಿದೆ. ಹೀಗೆ ಹೊರಬಂದರೆ ಆಗಾಗ್ಗೆ ಬೀಸುವ ಒಂದಿಷ್ಟು ಕುಳಿರ್ಗಾಳಿಯಲ್ಲಿ ಬಿಸಿ ಏರಿದ ಈ ದೇಹದ ಕಾವು ಇಳಿಯುತ್ತದಲ್ಲ...”
ಅವಳು ತುಟಿ ಕೊಂಕಿಸಿ ನಕ್ಕಳು. ಆ ನಗೆಯಲ್ಲೆ ವಿಷಾದ ತುಂಬಿದ ನೂರಾರು ಅರ್ಥಗಳಿವೆಯೋ..ಮಹೇಶ ಏನು ಹೇಳಲಾರದೆ ಕುಳಿತ ಕುರ್ಚಿಯಲ್ಲೆ ಮಿಡುಕಿದ್ದಾನೆ.

” ಏನಾದರು ನನ್ನ ಬಗ್ಗೆ ಕೇಳಬೇಕೆನಿಸುವುದಿಲ್ಲವೇ ನಿನಗೆ.” ಅವಳು ಅತಿ ಹಿಂದಿನ ಸಲಿಗೆಗೆ ಇಳಿದಿದ್ದಳು.” ನಿನ್ನ ಗಂಡ ಈಗ ಎಲ್ಲಿ?” ಅವನ ಪ್ರಶ್ನೆಗೆ ಮುನ್ನವೆ ಏನೆಲ್ಲ ತೋಡಿಕೊಳ್ಳಲು ಕಾತರ...ಅವಳ ಗಂಡ ಅಮರ್ ಚಂದ್ ಸೇಟ್ ದೊಡ್ಡ ಇಂಡಸ್ಟ್ರಿಯಲಿಸ್ಟ್ . ಕೋಟ್ಯಂತರ ರೂಗಳ ಒಡೆಯ. ನೋಡಲು ಅವನ ವ್ಯಕ್ತಿತ್ವ ತುಂಬಾ ಸುಂದರ.ಒಳಗೆ ಅವನ ಮನಸ್ಸು ಅಷ್ಟೇ ಕ್ರೂರ. ಸ್ವಭಾವವಂತು ವಿಕೃತ. ಸುಂದರವಾದ ವಸ್ತು ಯಾವುದೇ ಇರಲಿ ಒಂದು ಹೂವಾದರೂ ಹೊಸಕಿಯೆ ಆನಂದ ಪಡುವವ. ಮದುವೆಯಾಗಿ ಕಳೆದ ಎರಡು ವರ್ಷಗಳಲ್ಲಿ ಅವನೊಡನೆ ಸಂದ್ಯಾ ಕಳೆದ ರಾತ್ರಿಗಳು ಕೆಲವೇ ಆದರೂ ಘೋರ. ದಿನಕ್ಕೊಂದು ಟೇಸ್ಟಿನ ಹುಡುಗಿ ಬೇಕವನಿಗೆ ಯಾರು ಸಿಗದಿದ್ದಾಗ ಅವಳ ಪ್ರಾಣ ಹಿಂಡಿಬಿಡುತ್ತಾನೆ. ಅದಕ್ಕಾಗಿ ಊರೂರು ಬೇಕಾದರೂ ಅಲೆಯುತ್ತಾನೆ. ಅದೇ ಅವಳ ಪುಣ್ಯವೆಂದು ಹೇಳಬೇಕು. ಆಗ ಅವಳೊಂದಿಷ್ಟು ನಿರಾಳ ಉಸಿರಾಡುತ್ತಾಳೆ. ಇಲ್ಲವಾದರೆ, ಅವಳು ಅದೇನಾಗಿ ಬಿಡುತ್ತಿದ್ದಳೋ..”ಏನು ಶ್ರೀಮಂತಿಕೆ – ಸಂಪತ್ತು ಇದ್ದೇನ್ ಪ್ರಯೋಜನ? ಹೇಳು....” ಅವನು ಕೆಲ ಕ್ಷಣಗಳೆ ನಿರುತ್ತರನಾದ. “ ನೀನೂ ಒಂದು ಥರಾ ಇದೀಯಾ...ನಿನಗೂ ಸುಖವಿಲ್ಲಾಂತ ಕಾಣ್ಸೂತ್ತೇ..” ಕೇಳಿಯೇ ಬಿಟ್ಟಳು. “ ಇ,ಇ..ಇಲ್ಲ ಹಾಗೇನಿಲ್ಲ...”ತೊದಲಿದ. ” ಏನ್ ಇಲ್ಲಂತೀಯ..? ನಿಜಾ ಹೇಳು ಮಹೇಶ್... ನಾನು ಹೇಳಲ್ಲಿಲ್ಲವೇನು ಆತ್ಮೀಯರ ಹತ್ತಿರ ಹೇಳಿಕೊಂಡರೆ ಮನಸ್ಸು ಒಂದಿಷ್ಟು ಹಗುರವಾಗುತ್ತೇ.. “ನೇರ ನಿಟ್ಟಿಸಿದಳು. ಅವಳ ನೇರ ನೋಟದಲ್ಲಿ ಬಿಡಿಸಲಾಗದ ನೂರಾರು ಅರ್ಥಗಳು. ಅವನ್ನೆಲ್ಲಾ ಎದುರಿಸಲಾರನಾದ. “ ಮಹೇಶ್ ನೀನು ಸ್ಪಲ್ಪ ದ್ಯೆರ್ಯ ಮಾಡಿದಿದ್ದರೆ ನಾವಿಬ್ಬರು ಸುಖವಾಗಿರುತ್ತಿದ್ದೆವು... ನನ್ನ ಗಂಡ ಒಂದು ಪಶುವಿಗಿಂತಲೂ ಕೀಳೂ ಮನುಷ್ಯ... ಅವನು ನನ್ನೊಡನೆ ನಡೆದುಕೊಳ್ಳುವುದನ್ನೆಲ್ಲಾ ವಿವರಿಸೋಕೆ ಅಸಹ್ಯವಾಗುತ್ತೆ... ಹೇಳಬೇಕೂಂದ್ರೆ ನನ್ನ ಈ ಸುಕೋಮಲ ದೇಹದ ಮೇಲೆ ನಡೆದಿರೋ ದಾಳಿ ಅದರಿಂದಾದ ಕಲೆಗಳು ನೀನು ನೋಡಲಾರೆ... ಮೇಲ್ನೋಟಕ್ಕೆ ನಾನಿನ್ನು ಸುಂದರಳಾಗಿಯೆ ಜೀವಿಸಿದ್ದೀನಿ. ಈ ಸುಂದರ ಜೀವಕ್ಕೆ ಇನ್ನೇನು ಕಾದಿದೆಯೋ....”ಮತ್ತೆ ನಿಟ್ಟುಸಿರು ಬಿಟ್ಟಳು ಸಂದ್ಯಾ. ಮಹೇಶ ಕೇಳಿ ನೋವಿನಿಂದ ಮುದುಡಿಹೋದ. ಮೌನಕ್ಕೆ ಶರಣಾದ. ಸಂದ್ಯಾ ಮತ್ತೆ ಹೇಳಿದಳು – “ ನೀನು ನನ್ನ ಕ್ಯೆಹಿಡಿದಿದ್ದರೆ ತುಂಬಾ ಚೆನ್ನಾಗಿ ನೋಡಿ ಕೊಳ್ತಾ ಇದ್ದೆ. ಈ ಮೃದು ಶರೀರದ ಮೇಲೆ ಭಾರಬಿಟ್ಟರೆ ಅದೆಲ್ಲಿ ನೋವಾಗುತ್ತೋ...ಹಿಂಡಿದರೆ ಅದೆಲ್ಲಿ ಹಿಂಸೆಯಾಗುತ್ತೋಂತ..” “ಯಾಕೆ ! ಸುಮ್ಮನಾಗಿಬಿಟ್ಟೆ... ನಾನು ನಾಚಿಕೆಯಿಲ್ಲದೆ ಹೀಗೆ ಎಲ್ಲಾ ಹೇಳಿಕೊಳ್ಳುತ್ತಾ ಇದೀನಂತಲ್ಲಾ... ನಿನ್ನ ಹೆಂಡತಿ ನಿನ್ನ ಜೀವದ ಸಂಗಾತಿಯಾಗಲು ಪುಣ್ಯ ಮಾಡಿದ್ದಳು ಬಿಡು.....”ಅವಳ ದನಿಯಲ್ಲಿ ಅಪಾರ ನೋವು ಹೊರಹೊಮ್ಮಿತ್ತು. ಮಹೇಶನಿಗೆ ಇನ್ನು ತಡೆಯಲಾಗಲಿಲ್ಲ...ಅವನ ಕಣ್ಣುಗಳು ತೇವಗೊಂಡಿದ್ದವು. ಅವನು ನಿಧಾನವಾಗೇ ಹೇಳತೊಡಗಿದ- “ ಸಂದ್ಯಾ ನಾನು ತಪ್ಪು ಮಾಡಿಬಿಟ್ಟೆ....ನೀನು ಈವತ್ತು ಹಿಂಸೆ ಪಡ್ತಾ ಇದ್ದರೆ ಅದಕ್ಕೆ ನಾನೇ ಕಾರಣ.....ನಾನಾದರೂ ಸುಖವಾಗಿದ್ದೇನೆಯೇ....ಅದೂ ಇಲ್ಲಾ.....ನಿನ್ನ ಗಂಡ ಒಂದು ಪಶುವಾದರೆ, ನನ್ನ ಹೆಂಡತಿ ಒಂದು ಮನುಷ್ಯ ಪ್ರಾಣಿಯೆ ಅಲ್ಲ....ಅವಳು ಯಾವಾಗಲೂ ಏನೋ ಆತಂಕ ಭಯ ಅದರಲ್ಲೆ ಜೀವಿಸ್ತಾಳೆ ಅವಳಿಗೆ ಸುಖ ಪಡೋದೆ ಗೊತ್ತಿಲ್ಲ....ರಸಿಕತೆ ಎಳ್ಳಷ್ಟು ಇಲ್ಲ ಅವಳಿಗೆ. ಸೆಕ್ಸ್ ಎಂದರೆ ಸಾವನ್ನೆ ಕಂಡಂತೆ ಗಡಗಡ ನಡುಗುತ್ತಾಳೆ. ಪತಿಪತ್ನಿ ಸುರತದಲ್ಲಿ ಒಂದಾಗಿ ತುರೀಯಾವಸ್ಥೆಯಲ್ಲಿರುವಾಗ ಈ ಜೀವಸಮುದ್ರದ ಜಂಜಡವನ್ನೆಲ್ಲಾ ಮರೆತುಬಿಡುವ ಕಡೆಗೆ ಸಾವನ್ನು ದಿಕ್ಕರಿಸುವಂಥ ಅತೀವ ಸುಖವಿದೆ ಎಂಬುದನ್ನೇ ತಿಳಿಯದ ಮೂಢಳು. ಗಂಡು ಹೆಣ್ಣಿನ ಸಂಬಂಧವೆಂಬುದು ಕೇವಲ ಒಟ್ಟಿಗೇ ಇರೋದು ಅಡಿಗೆ ಮಾಡಿಕೊಂಡು ತಿನ್ನೋದು. ಒಡವೆ ವಸ್ತ್ರ, ಪಾತ್ರೆ ಪರಡಿ, ಬಟ್ಟೆಬರೆ ,ಆಸ್ತಿಪಾಸ್ತಿ ಕೊಂಡುಕೊಳ್ಳೋದಷ್ಟೇ ಎಂದು ತಿಳಿದಿರೋಳು...ಇನ್ನು ಇವಳು ನಿತ್ಯ ಉಡುವ ಸೀರೆಗಳೋ ಹಾಕಿಕೊಳ್ಳುವ ಒಡವೆಗಳೋ ದೇವರಿಗೇ ಪ್ರೀತಿ... ಪತಿ ದೇವರಿಗಲ್ಲವೇ ಅಲ್ಲ...ಎಲ್ಲವೂ ಇದ್ದು ಏನು ಇಲ್ಲದ ಹಾಗೇ.. ಹೇಳಿದರೇ ಅವಳದೇ ವಾದ...ಏನೂ ಕೇಳುವುದಿಲ್ಲ...ಹೇಳುತ್ತಾ ಹೋದರೆ ಬಹಳವಿದೆ....” ಮಹೇಶ ದೀರ್ಘವಾಗಿ ಉಸಿರೆಳೆದು ಕುರ್ಚಿಯಲ್ಲಿ ಹಿಂದಕ್ಕೊರಗಿದ. ಅವಳಿಗೆ ಏಕೋ ಏನೋ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದೇನೆ ಕುಳಿತಲ್ಲಿಂದ ಎದ್ದು ಬಂದವಳು ಅವನ ಕಾಲ್ದೆಸೆಯಲ್ಲೆ ಕುಸಿದು ಕುಳಿತಳು.” ಮಹೇಶ್ ನಾನಿನ್ನು ಹೆಚ್ಚು ದಿನ ಬದುಕಿರಲಾರೆ ಅನ್ನಿಸುತ್ತೇ... ನಿನಗೂ ನಿನ್ನ ಹೆಂಡತಿಯಿಂದ ಸುಖವಿಲ್ಲಾಂತ ಕೇಳಿ ನನ್ನ ಹೃದಯಕ್ಕೆ ದೊಡ್ಡ ಆಘಾತವೇ ಅಗಿದೆ. ಆದರೆ ಹೀಗೆಂದಾದರೂ ನಾವು ಇಬ್ಬರೇ ಏಕಾಂತದಲ್ಲಿ ಭೇಟಿಯಗುತ್ತೇವೆಂದು ಭಾವಿಸಿಯೇ ಇರಲಿಲ್ಲ... ಈ ದಿನ ಈ ರಸ ನಿಮಿಷಗಳು ನಮ್ಮನ್ನು ಅದೆಷ್ಟು ಹತ್ತಿರ ತಂದಿವೆಯಲ್ಲ...ಜೀವಿತದ ಸುಖಕ್ಕೆ ಹೊಸ ಅರ್ಥವನ್ನೆ ನೀಡಿವೆಯಲ್ಲ.. ಇನ್ನೇನು? ನಿನ್ನ ಎದೆಯಲ್ಲೆ ಕ್ಷಣಕಾಲವಾದರೂ ಕಣ್ಮುಚ್ಚಿ ಮಲಗಬೇಕೆಂಬ ಆಸೆ ನನಗೆ ತಪ್ಪು ತಿಳಿಬೇಡ...
ನನ್ನಲ್ಲಿ ಯಾವೊಂದು ದ್ಯೆಹಿಕ ವಾಂಛೆ ಉಳಿದಿಲ್ಲ... ಇಲ್ಲ ಅನ್ನಬೇಡ..” ಅವನ ತೊಡೆಯಲ್ಲಿ ಮುಖವನ್ನಿಟ್ಟು ಗಳಗಳನೇ ಅತ್ತೇಬಿಟ್ಟಳು. ಮಹೇಶನ ಹೃದಯವು ತೊಯ್ದು ಆರ್ದ್ರವಾಗಿತ್ತು. ಅವನು ತನಗರಿಯದೇನೆ ಕುರ್ಚಿಯಲ್ಲಿ ಕುಳಿತಿದ್ದಂತೇನೆ ಬಾಗಿ ಅವಳನ್ನು ತನ್ನೆದೆಗೆ ಒತ್ತಿಕೊಂಡು, ಅವಳ ಬೆನ್ನು ನೇವರಿಸ ತೊಡಗಿದ್ದ.
ಇನೂ ಹಲವು ಕ್ಷಣಗಳು ಕಳೆದು ಹೋದುದು ಅವರಿಗೆ ಹೊಳೆಯಲೆ ಇಲ್ಲ. ಮಹೇಶನೆ ಹೇಗೋ ಸಾವರಿಸಿಕೊಂಡ. ಮೆಲ್ಲನೆ ಅವಳ ದುಂಡು ಮುಖವನ್ನೆತ್ತಿ ಎರಡೂ ಬೊಗಸೆಯಲ್ಲಿ ಹಿಡಿದಿದ್ದ. ತದೇಕ ನಿಟ್ಟಿಸಿದ್ದ. ಆಕೆಯ ಕಣ್ಣಂಚ್ಚಿನಲ್ಲಿ ಕಂಬನಿ ಧಾರೆಯಾಗಿತ್ತು. ಅವನು ಅವಳ ಹಣೆಯನ್ನು ಚುಂಬಿಸಿದ್ದ.
ಆಕೆ ಭಾವಪರವಶತೆಯಿಂದ ಅನೇಕ ಬಾರಿ ಅವನ ಕೆನ್ನೆಗಳ ಮೇಲೆ ಚುಂಬಿಸಿದ್ದಳು. ಕಡೆಗೆ ಅವನ ತುಟಿಯನ್ನೇ ಒತ್ತಿ ಆ ಅಲ್ಪ ಸಮಯದಲ್ಲೆ ಜೀವಸಮುದ್ರವನ್ನೇ ಮಂಥನಗೈದು ಅಮೃತ ಕುಡಿಯುವವಳಂತೆ ಉನ್ಮತ್ತಳಾದಳು.

ಒಳ ಕೋಣೆಯ ಬಾಗಿಲ ಬಳಿ ಏನೋ ಸಪ್ಪಳವಾದಂತೆ ಭಾಸವಾಗುತ್ತಿತ್ತಲ್ಲ...ಮಹೇಶ ಗಾಬರಿಯಾದವನಂತೆ....ಎಚ್ಚರಗೊಂಡಿದ್ದ.

” ಸಂದ್ಯಾ... ಸಮಾಧಾನ ಮಾಡ್ಕೋ...ಕಂಟ್ರೋಲ್ ಯುವರ್ ಸೆಲ್ಫ್...ಒಳಕೋಣೆಯಲ್ಲಿ ನನ್ನ ಹೆಂಡತಿ ಇದ್ದಾಳೆ ನಾವು ಮರೆಯೋಹಾಗಿಲ್ಲ...”ತಲೆದಡವಿ ಮೆಲ್ಲನೆ ಬೆನ್ನು ಸವರುತ್ತಾ ಹೇಳಿದ್ದ.” ಓಹ್! ..” ಬೆಚ್ಚಿಬಿದ್ದವಳಂತೆ ಎದ್ದು ಕಳಿತಳು. ಜಾರಿದ ಸೆರಗನ್ನು ಉದ್ವೇಗದಿಂದ ಏರಿಳಿಯುತ್ತಿದ್ದ ತುಂಬು ಸ್ತನಗಳ ಮೇಲೆ ಪುನ: ಸರಿಯಾಗಿ ಎಳೆದುಕೊಂಡಳು.

No comments:

Post a Comment