ಜೀವ ಸಮುದ್ರ-೩

ಮಾರನೇ ದಿನ ಮಹೇಶ ಅವಳಿಂದ ಬೀಳ್ಕೊಂಡು ಹೊರಟು ನಿಂತಿದ್ದ, ಅವಳ ಮುಖದಲ್ಲಿ ಅದೇನೋ ಅಲ್ಪತೃಪ್ತಿ! ಆದರೂ ಅದೇ ಮರೆಯಲಾಗದ ಅದಮ್ಯ ಸುಖ ತಂದ ಸಂತೃಪ್ತಿ, ಮಹೇಶ ಅದನ್ನು ಗುರುತಿಸಿ ತುಸು ಸಂತಸಗೊಂಡ. ಆದರೆ ಅವಳ ಮುಂದಿನ ಜೀವಸಮುದ್ರ ಅತ್ಯಂತ ವಿಸ್ತ್ರತವು ಅಷ್ಟೇ ಅಬ್ಬರದ ಅಲೆಗಳಿಂದಲೂ ಅವೃತವಾಗಿದೆ ಎನ್ನಿಸಿದಾಗ........ ? ಮಹೇಶನ ಹೃದಯವೇ ಕಿತ್ತು ಬರುವಂತೆ ಆಗುತಿತ್ತು..... ಈ ಪ್ರಪಂಚದ ಕ್ರೂರ ವಿಧಿಯ ಅಣಕವೋ ಇದು ? ಮಹೇಶ ತನ್ನ ಜೀವಿತದ ಸಂಗಾತಿ ಸುಲಕ್ಷಣಾಳೆಡೆಗೆ ನೋಟ ಬೀರಿದ. ಅವಳೇಕೋ ಅದೇ ಮೊದಲ ಬಾರಿಗೆ ಅವನೋಂದಿಗೆ ಅನನ್ಯ ಅರ್ಥಗಳೇ ತುಂಬಿರುವ ಆ ನೋಟವನ್ನು ಎದುರಿಸದಾದಳು.

ಮಹೇಶ ಮಂದಸ್ಮಿತ ನಗೆ ನಕ್ಕ.... ಕೈ ಬೀಸಿದ ಸಂಧ್ಯಾಳೆಡೆಗೆ. ಸುಲಕ್ಷಣಾ ಕೂಡ ಹಾಗೆ ಕೈ ಬೀಸಿದಳು. ಅಷ್ಟರಲ್ಲೆ ಧಾವಿಸಿದ ಸಂಧ್ಯಾ, “ ನನ್ನ ಮೇಲೇನು ಕೋಪವಿಲ್ಲ ತಾನೇ ಸುಲಕ್ಷಣಾ..... ? ” ಅಂದಳು. ಅವಳು ಕೋಲೆ ಬಸವನ ಹಾಗೆ ತಲೆಯಾಡಿಸಿದಳು. ಮುಗ್ಧ ಮಗುವಿನ ಹಾಗೆ ಅವಳನ್ನು ಅಪಾದ ಮಸ್ತಕ ನೋಡಿದಳು... “ ಇವರೂ ನಿಮ್ಮನ್ನೇ ಮದುವೆಯಾಗಿದ್ದರೆ ಸುಖವಾಗಿರುತ್ತಿದ್ದರೇನೋ...... ” ಎಂದು ಗಳಗಳನೇ ಅತ್ತು ಬಿಟ್ಟಳು. ಕಾರಣ ಅ ಹಿಂದಿನ ರಾತ್ರಿ ಅವರಿಬ್ಬರೂ ಏಕಾಂತದಲ್ಲಿದ್ದಿದ್ದನ್ನು ನೋಡಿದ್ದಳು..... ಅವಳಿಗೆ ಕೋಪ ಬಂದಿರಲಿಲ್ಲ. ತಾನು ಹೆಣ್ಣಾಗಿ ಎಲ್ಲಿ ತಪ್ಪಿದ್ದೇನೆಂಬ ಅರಿವಾಗಿತ್ತು........ ಸಂಧ್ಯಾ ತಟ್ಟನೆ ಆಕೆಯನ್ನು ಎದೆಗವಿಚಿಕೊಂಡಳು. “ ಹೋಗಲಿ ಬಿಡು, ಮಹೇಶ ಅವರನ್ನು ಇನ್ನಾದರೂ ಚೆನ್ನಾಗಿ ನೋಡಿಕೊಳ್ತಿಯಲ್ಲ...... ಅವರಿಗೆ ಹೆಣ್ಣಿನ ಸುಖವೆಂದರರೇನು ಎಂಬುದನ್ನ ನೀನೇ ಚೆನ್ನಾಗಿ ತೋರಿಸಬಲ್ಲೆ.... ದೇವರು ನಿನಗೆ ಒಳ್ಳೆ ಗಂಡನ್ನ ಕೊಟ್ಟಿದ್ದಾನೆಂಬುದನ್ನು ಮರೀಬೇಡ....... ನನ್ನಂಥ ಎಷ್ಟೋ ನತದೃಷ್ಟ ಹೆಣ್ಣುಗಳಿಗೆ ಆ ಭಾಗ್ಯವಿರೋಲ್ಲ..... ನೋಡು, ಆತ ಒಬ್ಬ ಚಿತ್ರಕಲಾವಿದ ಬೇರೆ. ತನ್ನ ಕಲೆಯ ಗುಂಗಿನಲ್ಲಿ ಎಲ್ಲ ಮರೆಯಬಲ್ಲ ಶಕ್ತಿ ಆತನಿಗಿದೆ. ನಿಜ, ಅಲ್ಲದೇ ಹೆಣ್ಣುಗಳನ್ನು ಮರುಳುಗೊಳಸುವ ಕಲೆಗಾರಿಗೆ ಆತನದಲ್ಲ..... ಆತ ಮನಸ್ಸು ಮಾಡಿದ್ದರೆ ನನ್ನನ್ನೂ ಏನೂ ಮಾಡಬಹುದಿತ್ತಲ್ಲ...... ” ಈಗ ಅಳುವ ಸರದಿ ಅವಳಾದದರೂ ಸಾವರಿಸಿಕೊಂಡಳು ಸಂಧ್ಯಾ.

“ ಈ ಮುಂಬೈನ ಮಹಾಸಮುದ್ರ ನೋಡಲೇಂದೇ ನನ್ನನ್ನಾ ಮಹೇಶ ಇಲ್ಲಿಗೆ ಕರ್ಕೊಂಡುಬಂದ್ರು...... ಆದರೆ, ಈ ಜೀವಸಮುದ್ರದಲ್ಲೆ ಹೆಣ್ಣೊಬ್ಬಳು ಜೀವನಾನಂದ ಸ್ವರೂಪ ಹೇಗಾಗ್ತಳೆಂಬುದನ್ನ ನಿನ್ನನ್ನಾ ನೋಡಿದ್ಮೇಲೆ ತಿಳಿತು.... ನಾನು ಪ್ರಯತ್ನಿಸುತ್ತೇನೆ..... ಮಹೇಶ್ ಅವರಿಗಾಗಿಯೆ ಹಾಸಿಗೆಯಲ್ಲೆ ಜೀವ ಬಿಡಲಿಕ್ಕೂ ಈಗ ತಯಾರಾಗಿದ್ದೇನೆ...” ಎಂದು ಬಾರದ ನಗೆ ತಂದುಕೊಂಡು ತಲೆತಗ್ಗಿಸಿಬಿಟ್ಟಳು. “ ನೋಡಿದೀಯಾ ಮಹೇಶ ನಿನ್ನ ಹೆಂಡತಿ ಅದೆಷ್ಟು ಜಾಣೆ!... ಎಷ್ಟು ಚೆನ್ನಾಗಿ ಮಾತಾಡ್ತಾಳೆ...” ಮಹೇಶ ಮೆಲ್ಲನೆ ಸಂಧ್ಯಾಳ ಬಳಿ ಸಾರಿ ಅವಳ ಕೈಗಳನ್ನು ತನ್ನದರಲ್ಲಿ ತೆಗೆದುಕೊಂಡು ಹೇಳಿದ- “ ನೀನು ನನಗೊಂದು ಮಾತು ಕೊಡ್ಬೇಕು ಸಂಧ್ಯಾ........ ನೀನು ನಿನ್ನ ಗಂಡನಿಂದ ದೂರವಾಗಿದ್ದು ಜೀವನ ನಡೆಸಿದರೂ ಸರಿಯೆ ನಿನ್ನ ಜೀವಕ್ಕೇನೂ ಹಾನಿ ಮಾಡ್ಕೊಬಾರದು.” ಅವಳು ಅವನನ್ನೇ ತನ್ನ ತೇವಗೊಂಡ ಕಣ್ಣುಗಳಲ್ಲಿ ತುಂಬಿಕೊಂಡಳು ಮೆಲ್ಲನೆ “ ಇಲ್ಲ ಮಹೇಶ ಹಾಗೆ ಮಾಡಲಾರೆ.... ನಾನೂ ಬದುಕಬೇಕು...”

ಅಂದಳು. ಅವಳ ಅಂಗೈಯನ್ನು ಮೃಉದುವಾಗಿ ಅದುಮಿದ ಮಹೇಶ. ಗಂಡ ಕೈ ಬೀಸಿ ಬೈ ಬೈ ಹೇಳಿದಾಗ ಸುಲಕ್ಷಣಾ ಕೂಡ ಒಲ್ಲದ ಮನಸ್ನಿನಿಂದಲೇ ಕೈಯಾಡಿಸಿದಳು. ಮನಸ್ಸೆಂಬುದು ಎಷ್ಟು ದುರ್ಬಲ !



ರೈಲು ಶಿವಮೊಗ್ಗದತ್ತ ಧಾವಿಸುತ್ತಿತ್ತು. ಮಹೇಶನ ಮನಸ್ಸು ಹೆಂಡತಿಯೊಡನೆ ಕಳೆದ ಹಿಂದಿನ ದಿನಗಳನ್ನು ಮೆಲುಕು ಹಾಕುತ್ತಿತ್ತು ಹೆಂಡತಿ ಸುಲಕ್ಷಣಾ ಇನ್ನಾದರೂ ಯಾವೋಂದು ಭಯ ಆತಂಕಗಳಿಲ್ಲದೇನೆ ತನ್ನೊಡನೆ ಜೀವನ ಸಂಗಾತಿಯಾಗಿ ಸುಖ ನೀಡುತ್ತಾಳೆಂದರೆ ನಿಜಕ್ಕೂ ತಾನು ಭಾಗ್ಯಶಾಲಿಯೆ. ಆದರೆ ಕಳೆದ ಎರಡು ವರ್ಷಗಳಿಂದ ಅವಳ ಸ್ವಭಾವವನ್ನು ಬಲ್ಲವನಿಗೆ ಅವಳು ಇದ್ದಕ್ಕಿಂದ್ದತೇನೆ ಸರಿಹೋಗುತ್ತಾಳೆಂದರೆ ನಂಬುವುದಕ್ಕೇ ಆಗುವುದಿಲ್ಲವಲ್ಲ...ಸುಲಕ್ಷಣಾ ಮೈಕೈ ತುಂಬಿಕೊಂಡು ಕಣ್ ಸೆಳೆವ ಚೆಲುವೆಯೇ. ಸಂದ್ಯಾಳೊಡನೆ ಹೋಲಿಸಿದರೆ ಇವಳ ದುಂಡು ದುಂಡಾದ ದೇಹಕಾಂತಿಯೇ ಮೇಲುಗೈ ಪಡೆಯುತ್ತದೆ. ಸಂದ್ಯಾ ತೀರ ಕೃಶಾಂಗಿ ಏನಲ್ಲವಾದರೂ ಅಂಥ ಕೃಶಾಂಗಿ ಯಾದ ಹೆಣ್ಣಿನಲ್ಲೂ ಜೀವಸಮುದ್ರದ ಸೆಲೆಯೆ ಚಿಮ್ಮುವುದೂ ಬದುಕಿನಲ್ಲಿ ಅದಮ್ಯವಾದ ಉತ್ಕರ್ಷ ಆನಂದವೆ ಚಿಮ್ಮುವುದೂ ಇದೆಯಲ್ಲಾ.. ಅದೇ ಸೃಷ್ಟಿಯ ಸೋಜಿಗ. ಸುಲಕ್ಷಣಾ ಎಲ್ಲಾ ದೃಷ್ಟಿಕೋನದಲ್ಲೂ ದಷ್ಟ ಪುಷ್ಟ ಮೈಮಾಟದಿಂದ ಸೂಜಿಗಲ್ಲಿನಂತೆಯೆ ಸೆಳೆದರೇನು ! ಸಕಲ ಗುಣಸಂಪನ್ನೆ, ದೈವಭಕ್ತೆ, ಸಂಪ್ರದಾಯಸ್ತೆ ಆದರೇನು? ಗಂಡನೊಡನೆ ಜೀವದ ಹಂಗುತೊರೆದು ಮಿಲನದಲ್ಲಿ ಸುಖಿಸುವುದನ್ನು ಕಾಣದೇನೆ ಸುರತಿಯ ಕೊನೆಘಟ್ಟಕ್ಕೆ ಮುನ್ನವೇ ಸುಮ್ಮನೆ ಸಾವಿನ ಭಯದಿಂದಲೇ ಕಂಗಾಲಾಗಿಬಿಡುವವಳಲ್ಲ..ಇಂಥ ಇತ್ತ ಕೊರಡೂ ಅಲ್ಲದೆ ಅತ್ತ ರಸಒಸರುವಿಕೆ ಎಂಬುದೂ ಇಲ್ಲದೇನೆ ಇವಳೊಂದಿಗೆ ಬರಡು ಜೀವನ ಸವೆಸುವಂತಾಗಿದೆಯಲ್ಲಾ... ಮಹೇಶ ಹೀಗೆ ಸಾವಿನ ಭಯದಲ್ಲಿ ಜೀವಿಸುವವಳೋಂದಿಗೆ ಬಾಳುವೆ ಮಾಡುವುದಾದರೂ ಹೇಗೆಂದು ಚಿಂತಿಸುತ್ತಲೇ ಬಂದಿದ್ದಾನೆ........ ಒಮ್ಮೆ ಯಾರೋ ಹತ್ತಿರ ಸಂಬಂದಿಯೊಬ್ಬರು ತೀರಿಕೊಂಡರು. ಮಹೇಶ ಅವರ ಅಂತ್ಯಕ್ರಿಯೆಗೆ ಹೋಗಿ ಬಂದಿದ್ದ. ಅವನು ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಅದೂ ಡಿಸೆಂಬರ್ ತಿಂಗಳ ಕೊರೆಯುವ ಚಳಿಗಾಲ ಬೇರೆ. ಮನೆ ಕದ ತಟ್ಟುತ್ತಿಂದ್ದಂತೇನೆ ಸುಲಕ್ಷಣಾ ಓಡೋಡಿ ಬಂದು ಬಾಗಿಲು ತೆರೆದಿದ್ದಳು. “ ಅಯ್ಯೋ ಒಳಗೆ ಬರಬೇಡಿ........ ಅಲ್ಲೇ ಸ್ವಲ್ಪ ನಿಲ್ಲೀಂದ್ರೆ... ” ಅಂದಳು ! ಕೂಡಲೇ ಒಂದು ಬಕೆಟ್ ನೀರು ತಂದಳು. “ ಬನ್ನಿ ಬನ್ನಿ ಇಲ್ಲಿಗೆ....” ಎಂದು ಗಂಡನಿಗೆ ಆರ್ಡರ್ ಮಾಡಿ ಬೀದಿ ಬಾಗಿಲ ಮೆಟ್ಡಿಲ ಮೇಲೆ ಅವನ್ನನ್ನು ನಿಲ್ಲಿಸಿದಳು. ತಲೆ ಮೇಲೆ ಆ ಒಂದು ಬಕೆಟ್ ನೀರು ಸುರಿದು ಬಿಟ್ಟಳೂ. ಪಾಪದ ಪ್ರಾಣಿ ಮಹೇಶ ಚಳಿ ರಾತ್ರಿಯಲ್ಲಿ ಗಡಗಡ ನಡುಗತೊಡಗಿದ. ಮತ್ತೆ ಅವನು ಪ್ಯಾಂಟ್ ಷರಟು ಎಲ್ಲ ಅಲ್ಲೇ ಕಳಚಿ ಬಂದ್ಮೇಲೆನೇ ಅವಳು ಅವನನ್ನು ಒಳಗೆ ಕರೆದುಕೊಂಡಿದ್ದು. ಇದೂ ಅನುಚಾನ ಸಂಪ್ರದಾಯವೇ ಇದ್ದೀತು. ಆದರೆ, ಸಾವೊಂದಕ್ಕೆ ಹೋದರೆ ಅದು ನಮ್ಮ ಬೆನ್ನ ಹಿಂದೆ ಬಂದಿದೆ ಎಂದು ಭಾವಿಸಿ ಭಯ ಪಡುವುದೇಕೋ... ಅಷ್ಟಕ್ಕೂ ಅದೇ ನಗ್ನ ಸತ್ಯವಲ್ಲವೇ.... ? ಹೋದವರು ಇಂದು ಹೋದರು.... ನಾವೊ ಇಂದಲ್ಲ ನಾಳೆ ಹೋಗುವವರು ತಾನೇ.... ಆ ಬಳಿಕ ಪಾಪ ಮಹೇಶ ಒಂದೆರೆಡು ದಿನಗಳೇ ಚಳಿ ಜ್ವರದಿಂದ ನರಳಿದ್ದ. ಸುಲಕ್ಷಣಾ ಇನ್ನಷ್ಟು ಗಾಬರಿಯೇ ಆಗಿದ್ದಳು. ಆ ಸಾವಿಗೆ ಹೋಗಿ ಬಂದ ಇವನೂ ಸತ್ತೇ ಹೋಗುತ್ತಾನೆಂದೇ ಭಯಭೀತೆಯಾಗಿದ್ದಳು. ಮಹೇಶ ಔಷಧೋಪಚಾರಗಳಿಂದ ಚೇತರಿಸಿಕೊಂಡಾಗ ತಾನು ಕಂಡ ಕಂಡ ದೇವರಿಗೆ ಹರಗೆ ಹೊತ್ತು ಉಳಿಸಿಕೊಂಡೆನೆಂದೇ ಬಾವಿಸಿದಳು. ಸುಲಕ್ಷಣಾ ಸದಾ ಕಣ್ಣೇದುರಿನಲ್ಲೇ ಅಲಂಕೃತೆಯಾಗಿ ನಗೆ ಮಲ್ಲಿಗೆ ಚೆಲ್ಲುತ್ತಾ ವಿವಿಧ ಉಡುಪು ವಿನ್ಯಾಸದಲ್ಲಿ ಕಂಗೋಳಿಸಿದರೇನೆ ಬಲು ಚೆನ್ನ. ತನ್ನ ಕುಂಚ ಕ್ಯಾಮೆರಾಗಳಿಗೆಲ್ಲ ಸ್ಪೂರ್ತಿ ಎಂದೇ ಅವಳನ್ನು ಉಡುಗೆ ತೊಡುಗೆಗಳಲ್ಲಿ ಆಕರ್ಷಕವಾಗಿರಬೇಕೇಂದು ಒತ್ತಾಯಿಸುವ ಮಹೇಶ ಅವಳಿಗೆ ಕಲಾವಿದನಾಗಿ ಒಂದಿಷ್ಟು ಭಿನ್ನವಾಗಿಯೆ ನಡೆದುಕೊಂಡುದರಲ್ಲಿ ಅಚ್ಚರಿಯೇನಿರಲಿಲ್ಲ. ಅಷ್ಟಕ್ಕೂ ಸುಲಕ್ಷಣಾ ಸನ್ಯಾಸಿನಿಯೋ ಅಥವಾ ಯಂತ್ರದ ಬೊಂಬೆಯೋ ಎನ್ನುವಂತಿರಲಿಲ್ಲವಲ್ಲ. ಯಾವ ಗಂಡಸೇ ಆಗಲಿ ತನ್ನ ಹೆಂಡತಿ ತನ್ನೆದುರಿಗೆ ನಿತ್ಯವೂ ಸಾಲಂಕೃತೆಯಾಗಿ, ಚೆಲುವಿನ ಖನಿಯಾಗಿರ ಬೇಕೇಂದು ಬಯಸುತ್ತಾನಲ್ಲ.... ಅಷ್ಟೇ ಅಲ್ಲ ಆಕೆ ಒಂದಿಷ್ಟು ಅವನ ರಸಿಕತೆಗೆ ಸ್ಪಂದಿಸದಿದ್ದರೆ ಹೇಗೆ ? ಮಹೇಶ ಸ್ನಾನಕ್ಕೆಂದು ಬಚ್ಚಲಿಗೆ ಹೋದರೆ ಬಿಸಿ ನೀರು ಟವಲ್ ಎಲ್ಲವೂ ಸಿದ್ದವೇ. ಅವನು ಬೆನ್ನುಜ್ಜಲು ಕೆರೆದರೆ ಮಾತ್ರ ಬರುವುದೇ ಇಲ್ಲ. ಹಾಗೆ ಬಂದು ಅವಳು ತನ್ನ ಮೃದುವಾದ ಹಸ್ತದಿಂದ ತೀಡಿದರೆಷ್ಟು ಚೆನ್ನ!.... ಆಕೆ ಸ್ನಾನ ಮಾಡುವಾಗ ಬಾತ್ ರೂಂ ಒಳಗೆ ಸೇರಿಕೊಂಡನೆಂದರೆ ಹಾಳಾದವಳು ಹೊರಗೆ ದಬ್ಬಿಬಿಡುತ್ತಾಳಲ್ಲ.... ಛೀ ದೂರ ಹೋಗ್ರಿ ಯಾವುದು ಅತಿಯಾದರೆ ನಾಳೆ ಹೇಗೋ ಏನೋ.... ಅಯ್ಯೋ ರಾಮ ಇವಳಿಗೆ ರತಿಕ್ರಿಯೆ ಗಾಳಿಯೂ ಕೂಡ ಅತಿ ಎನಿಸಿದರೆ ಹೇಗೆ ಬಾಳುವುದೋ...... ಕಲಾವಿದನಾದವನೂ ಸ್ವತಃ ರಸಿಕನಾಗದೇನೆ ರಸಿಕರೆದೇ ತಟ್ಟಲಾರನಲ್ಲ.... ಅವನ ಏನೆಲ್ಲ ಸಾಧನೆಯ ಹಿಂದೆ ಹೆಣ್ಣೊಬ್ಬಳಿರುತ್ತಾಳಂತೆ ... ಆಕೆ ಸುಂದರಿ ಮಾತ್ರವಲ್ಲ ಅವಿರತ ಜೀವ ಸುಖವನ್ನೇ ಚಿಮ್ಮುವ ಕಾರಂಜಿಯಾಗಿ ಗಂಡನಿಗೆ ಸ್ಪೂರ್ತಿಯ ಸೆಲೆಯಾಗಿಯೇ ಇರುವಳಲ್ಲ.... ಸುಲಕ್ಷಣಾಳಾದರೋ.... ಯಾಕೆ ಹೀಗೆ ಇವಳಿಗೆ ಹೇಗೆ ಅನುನಯಿಸಿ ಹೇಳುವುದೋ.... ಹಗಲಿರುಳು ಕೊರಗಿದ್ದಾನೆ ಮಹೇಶ.

ಹವ್ಯಾಸಿ ಕಲಾವಿದರಾದವರು ಸಾಮಾನ್ಯವಾಗಿ ರೊಮ್ಯಾಂಟಿಕ್ ನೆಲಯಲ್ಲಿ ಕೃತಿ ರಚನೆ ಮಾಡುತ್ತಾರೆ. ಮಹೇಶ ಕ್ಯಾನ್ವಾಸಿನಲ್ಲಿ ತನ್ನಾಕೆಯ ಸಂಪೂರ್ಣ ನಿಲುವಿನ ಸುಪುಷ್ಟ ದೇಹದ ಚೆಲ್ವಿಕೆಯನ್ನೆಲ್ಲ ಸೂರೆಯೊಡೆದು ಸೆರೆ ಹಿಡಿದಿಡುವಂತಹ ಭಾವ ಚಿತ್ರವೊಂದನ್ನು ಸೃಷ್ಟಿಸುವ ಅತೀವ ಹಂಬಲ ಹೊತ್ತಿದ್ದ. ಅದು ಕೇವಲ ಹಂಬಲವಾಗಿಯೇ ಉಳಿದಿತ್ತು. ಯಾಕೆಂದರೆ, ಅವಳು ಅಷ್ಟು ತಾಳ್ಮೆಯಿಂದ ಅವನೆದುರಿಗೆ ಮಾಡೆಲ್ ಆಗಿ ಕೂರಬೇಕಲ್ಲ.... ಆ ಮಾತೆತ್ತಿದರೆ ಸಾಕು ಸಿಡುಕುತ್ತಾಳೆ. ತಾನು ಎಂದೋ ಮನಸ್ಸು ಮಾಡಿದ್ದರೆ ಸಂಧ್ಯಾಳನ್ನು ಕೂರಿಸಿ ಅಂಥದೊಂದು ಭಾವಚಿತ್ರ ರಚಿಸಿ ಯಾವುದಾದರೂ ಸ್ಪರ್ಧೆಗೆ ಕಳುಹಿಸಲೂ ಬಹುದಾಗಿತ್ತಲ್ಲ.... ಅಲ್ಲಿಗೂ ಸುಲಕ್ಷಣಾಳನ್ನು ಅಷ್ಟಿಷ್ಟು ಒಲಿಸಿ ಅವಳ ಕೆಲವು ಛಾಯಚಿತ್ರಗಳನ್ನು ಕ್ಲಿಕ್ಕಿಸಿ ತಾವಿಬ್ಬರೂ ಮಲಗುವ ಕೋಣೆಯಲ್ಲಿ ಗೋಡೆಗಳಿಗೆ ತೂಗು ಹಾಕಿದ್ದಾನೆ. ಆ ಚಿತ್ರಗಳೇಕೆಂದು ಅವಳು ಜಗಳವಾಡಿದ್ದೂ ಉಂಟಲ್ಲ....... “ಏನ್ರಿ ನಿಮ್ಮ ಚಿತ್ರಕಲೆಗೆ ಹೆಣ್ಣೇ ವಸ್ತುವಾಗ್ಬೇಕೆನೂ.... ” ಎಂದೂ ಸಿಡುಕಿದ್ದಾಳೆ ಸುಲಕ್ಷಣಾ. “ ಪ್ರಪಂಚದಲ್ಲಿ ಏನೆಲ್ಲ ರೂಪ ಸಂಪತ್ತುಗಳಿರಲಿ ಅದರಲ್ಲಿ ಮನುಷ್ಯನಿಗೆ – ಕವಿ ನೇಮಿಚಂದ್ರ ಹೇಳಿರುವಂತೆ- ‘ಸ್ತ್ರೀ ರೂಪಮೇ ರೂಪಂ. ಶೃಂಗಾರಮೇ ರಸಂ ’ ” ಎಂದು ಮಹೇಶ ಮತ್ತೂ ಹೆಂಡತಿಗೆ ಹೇಳಿದ – “ ಬಾಹ್ಯ – ಅಂತರಂಗ ಸೌಂದರ್ಯಗಳೆರಡೂ ಮಿಳಿತಗೊಂಡಾಗ ಕಾಮ ಪ್ರೇಮಗಳ ಮಹತ್ವವೆ ಅಪೂರ್ವ ಅನನ್ಯವಾಗುತ್ತದೆ ಸುಲಕ್ಷಣಾ... ನಿಜವಾದ ಕಲಾವಿದನ ಕಲೆಯಲ್ಲೂ ಅದೇ ಗೋಚರಿಸುವುದಲ್ಲವೇ....”

“ ಏನೋರಿ .... ನನಗೆ ಮೈ ಚಳಿ ಬಿಟ್ಟು ಕೂರಬೇಕೆಂದ್ರೆ ಒಂಥರಾ ಆಗುತ್ತೇರೀ.... ” ಅದೇ ಆತಂಕ ಮುಖದ ಮೇಲೆ.

ಇನ್ನೂ ಇವಳನ್ನು ಪೂರ್ಣ ಬೆತ್ತಲಾಗಿ ಕೂರು ಎಂದರೇನು ಗತಿಯಪ್ಪಾ ಎಂದೇ ಚಿಂತಾಕ್ರಾಂತನಾಗುತ್ತಿದ್ದ ಮಹೇಶ. ಹೇಗೋ ಇವಳನ್ನು ಬಲವಂತದಿಂದ ಕೂರಿಸಿ ಭಾವ ಚಿತ್ರವೊಂದನ್ನು ರಚಿಸಿಬಿಡಬಹುದು. ಅವನಿಗೆ ಜಲವರ್ಣದಲ್ಲಿ ಸತ್ಯಬಿಂಬಿಸುವ ಕಲೆಯೆ ಸಿದ್ದಿಸಿದೆಯಲ್ಲ.ಆದರೇನು ! ರಾಧೆಗೆ ಇದ್ದಂಥ ಅನುರಾಗ ಭಾವನೆ , ಮೈ ಚಳಿ ಬಿಟ್ಟು ಮೆರೆವಂತ ಅವಳ ಆರಾಧನೆ ಹಾಗೂ ಸೌಂದರ್ಯದ ಅರ್ಪಾಣಾಕರ್ಷಣೆಯೆ ಇಲ್ಲದ ಮೇಲೆ ಸುಲಕ್ಷಣಳ ತುಂಬು ಚಲ್ವಿಕೆಯ ಮೈ ಮಾಟವೋ, ಅವಳ ಚಂದಿರನ ಹೋಲುವ ಮುಖದಂಡವೋ ಏನೇನೋ ಆಗಿ ಜೀವಕಳೆಯೆ ಇಲ್ಲದ ಸಮುದ್ರದ ಹುಚ್ಚು ಅಲೆಗಳಬ್ಬರದಂತೇ ಆದರೇನು ಭಾಗ್ಯ.. ?

.....ರೈಲು ಚಲಿಸುತ್ತಿದೆ. ಸುಲಕ್ಷಣಾ ಕಿಟಕಿಯ ಮಗ್ಗುಲಿಗೆ ಕುಳಿತು ಹೊರಗಿನ ಪ್ರಕೃತಿ- ಗಿಡ ಮರ, ಬೆಟ್ಟ, ಗುಡ್ಡ ಗಳತ್ತ ನೋಟ ಹರಿಸಿದ್ದವಳಿಗ ನಿದ್ರೆಯ ಮಂಪರಿಸನಲ್ಲಿದ್ದಾಳೆ..... ಅವಳ ಸುಂದರ ಮುಖವೀಗ ಶುಭ್ರವಾಗಿದೆ ಎನ್ನಿಸುತ್ತಿದೆ. ಹಿಂದಿನ ದಿನಗಳ ಸೊಂಕೇನೂ ಅಲ್ಲಿ ಗೋಚರಿಸುತ್ತಿಲ್ಲ. ಇನ್ನೆಲ್ಲಾ ಸರಿಯಾಗುತ್ತದೆ. ನಮ್ಮ ಸಂಸಾರದಲ್ಲಿ ಸಾಮರಸ್ಯ ಸುಖ ಬರುತ್ತದೆ. ಅದಕ್ಕೆ ಕಾರಣ ಸಂಧ್ಯಾ..... ಅವಳು ಸ್ವಾರ್ಥೀಯಾಗಬಹುದಿತ್ತು... ಉಹೂಂ ಹಾಗಾಗಲಿಲ್ಲ. ಅವಳಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಕಡಿಮೆಯೇ.

ಸುಲಕ್ಷಣಾ ಊರಿಗೆ ಹೋದ ಮೇಲೆ ಬದಲಾಗಿರುತ್ತಾಳೆ. ಅವಳ ಸಾಮಿಪ್ಯ ಮೊದಲಿಗಿಂತ ಸಹ್ಯವೆನಿಸುತ್ತದೆ. ಸುಖವನ್ನೇ ನೀಡುತ್ತದೆ ಅಂದುಕೊಂಡ. ಮತ್ತೇಕೋ ಹಳೆಯ ಕಹಿಯ ನೆನಪು- ಅವಳೊಡನೆ ಕಳೆದ ಮಧುರ ರಾತ್ರಿಗಳ ನೆನಪು. ಅವು ಮಧುಚಂದ್ರದ ರಾತ್ರಿಗಳೆ ಆದರೂ ಮಧುರವೆನಿಸಲಾರದೇ ಹೋದುವಲ್ಲ....... ಹಾಸಿಗೆಯಲ್ಲಿ ತನ್ನಾಕೆ ಮನ ಬಿಚ್ಚಿ ಮೈ ಸಡಿಲಿಸಿ ಒಡ್ಡಿಕೊಂಡುದೇ ಇಲ್ಲ. ರತಿ ಕ್ರೀಡೆಯೊಂದು ಅಸಹ್ಯ . ಅಲ್ಲ ಇದು ನಮಗೆ ಅನನ್ಯ ಅನಿವಾರ್ಯವೆಂದರೆ ಸೀರೆ ಸರಿಸಲು ಬಿಟ್ಟು ಕೊರಡಿನಂತೆ ಬಿದ್ದಿರುತ್ತಿದ್ದಳಲ್ಲ..... ಅವಳನ್ನೊಮ್ಮೆ ಕೋಣೆಯ ದೀಪದ ಬೆಳಕಿನಲ್ಲಿ ವಿವಸ್ತ್ರಳನ್ನಾಗಿಸಿ, ನವಿರಾಗಿಯೆ ಉದ್ರೇಕಿಸಿ ಆ ನಗ್ನ ಸೌಂದರ್ಯವನ್ನು ಮನಸಾರೆ ಸವಿಯುತ್ತ, ಅವಳ ದೇಹಮಿಲನದಲ್ಲೊಂದಾಗಿ ಜೀವದ ಹಂಗು ತೊರೆದು, ಇನ್ನೇನು ಯಾತನಾ ಸುಖದ ತುರೀಯಾವಸ್ಥೆಯನ್ನು ತಲುಪಲಿದ್ದಾಗ, ತಟ್ಟನೆ ಕೋಪೋದ್ರಿಕ್ತಳಾಗಿದ್ದಳು. ಸುಖದ ಮತ್ತಿನಿಂದೇರಿದ ಕಾವು ಇಳಿದೇ ಹೋಗಿತ್ತು. ದಿಗ್ಗನೆದ್ದು ಕೂಳಿತವಳು “ ನೋಡ್ರಿ, ನೀವು ಅತಿ ಕಾಮಿ ತರಹ ಆಡ್ತೀರ .... ನನ್ನ ಅಪ್ಪ ಕೂಡ ಅತಿ ಕಾಮಿಯಂತೆ ಗೊತ್ತೇನು ? ಅಮ್ಮನ ಜೊತೆ ಅವರು ಹೀಗೆ ವರ್ತಿಸೋರು... ಆಕೆಯನ್ನು ಸಂಪೂರ್ಣ ಬೆತ್ತಲೆಯಾಗಿಸಿಯೆ. ಅವರ ಅಲ್ಪಾಯುಷ್ಯಕ್ಕೆ ಅದೇ ಕಾರಣವಂತೇರಿ..... ನಿಮಗೇ ಗೊತ್ತಲ್ಲ....... ಇ ಹಾಳು ತೀಟೆ ಮುಗಿಯುತ್ತಿದ್ದಂತೆ ನಾವಿಬ್ಬರೂ ಸತ್ತಂತೇಯೆ ಮಗ್ಗುಲಾಗಿ ಬಿದ್ದುಕೊಳ್ತೇವಲ್ಲ.....” ಅನ್ನಬೇಕೇ ಅವಳು .... ?

ಮಹೇಶ ದಿಗ್ಮೂಢನಾಗಿದ್ದ. ಅಲ್ಲಾ ಗಂಡು ಹೆಣ್ಣು ರತಿ ಸುಖದಲ್ಲಿ ಯಾವ ಬಗೆಯಲ್ಲಿ ವರ್ತಿಸಿದರೂ ತಪ್ಪೇನಿಲ್ಲ..... ಹೇಳಬೇಕೆಂದರೆ, ಬೇರೆಲ್ಲ ಪ್ರಾಣಿಗಳಿಗಿಲ್ಲದೇ ಇರುವ ರತಿ ಸೌಖ್ಯವನ್ನು ಮನುಷ್ಯ ಹೊಂದಬಹುದಾಗಿದೆ. ಅನೇಕಾನೇಕ ವಿಧದಲ್ಲಿ ಅವನು ತನ್ನವಳೊಡನೆ ಸರಸವಾಗಿ ರಮಿಸಬಹುದಾಗಿದೆ. ಇಬ್ಬರೂ ಅನ್ಯೋನ್ಯವಾಗಿ ಸಹಕರಿಸಿದರೆ ಒಂದಾದರೆ ಹಿಂಸೆ ನೋವುಗಳಿಗೆ ಅವಕಾಶವೆಲ್ಲಿಯದು ?..... ಮನಸ್ಸುಗಳು ಒಂದಾದರೆ ದೇಹಗಳು ಇಹದ ಹಂಗು ತೊರೆದು ಒಂದಾಗುತ್ತವೆಯಲ್ಲ..... ತಮಗರಿಯದೇನೆ ತಲುಪುವ ಕೊನೆಯ ಹಂತದಲ್ಲಿ ಸಿಗುವ ಯಾತನಾ ಸುಖವೆಂಬುದು ಪ್ರಕೃತಿ ಸಹಜವೇ ಆಗಿದೆಯಲ್ಲ..... ಸುಲಕ್ಷಣಾಳಿಗೆ ಏನೆಲ್ಲ ಹೇಳಿದ್ದೇನಲ್ಲ... ಅವನು. ಆಗ ಅವಳು ಕಿವಿಮೇಲೆ ಹಾಕಿಕೊಂಡಿರಲಿಲ್ಲ.... ಈಗೇನು ಮಾಡುವಳೋ.... ಇವಳು ಮುಕ್ತಮನಸ್ಸಿನಿಂದ ತೆರೆದು ಕೊಂಡರೆಷ್ಟು ಚೆನ್ನ. ಇವಳೂ ತಾಯಿಯಾಗುವುದನ್ನೂ ನೋಡುವುದು ಆವಾಗಲೇ ತಾನೇ.....

ಇಲ್ಲ ಸುಲಕ್ಷಣಾ ಅವನೊಡನೆ ಮುಂಬೈ ಪ್ರವಾಸ ಮಾಡಿಬಂದ ಮೇಲೆ ಬಹಳ ಬದಲಾಗಿದ್ದಾಳೆ. ಬೆಳಗ್ಗಿನಿಂದ ಸಂಜೆಯವರೆಗೆ ಗಂಡನಾದವನ ಬೇಕು ಬೇಡಗಳನ್ನು ಗಮನಿಸುತ್ತಾಳೆ. ರಾತ್ರಿಗಳಲ್ಲಿ ನವ ವಧುವಿನಂತೆ ಅವನನ್ನು ಆಹ್ವಾನಿಸುತ್ತಾಳೆ. ಅವಳೀಗ ನವಿರಾಗಿ ತೆರೆದುಕೊಳ್ಳುವ ಪರಯೇ ಅವನಿಗೆ ತೀರ ಸೋಜಿಗವನ್ನುಂಟು ಮಾಡಿದೆ..... ಅಂದೊಮ್ಮೆ ಹೇಳಿದ್ದಳು- “ ನಿಮಗೆ ನನ್ನದೊಂದು ಸಂಪೂರ್ಣ ನಿಲುವಿನ ಭಂಗಿಯ ಬಾವಚಿತ್ರ ಬರೆಯ ಬೇಕೆಂಬ ಆಸೆ ಇದೆಯಲ್ಲವೇ ? ಈಗ ಬರೆಯುತ್ತೀರಾ........ ನಾನು ಏನ್ ಡ್ರೆಸ್ ಮಾಡಿಕೊಂಡು ಬರಲಿ ಹೇಳಿ... ಹೇಗೆ ಕೂರಲಿ ಹೇಳಿ....... ಎಲ್ಲ ನಿಮ್ಮ ಇಚ್ಚೆಯಂತೆಯೆ ನಡೆಯಲಿ ಆಗದೇ........ ” ಅಂದಿದ್ದಳು ! ಮಹೇಶ ತೀರ ಚಕಿತನಾಗಿದ್ದ. ಕಡೆಗೂ ಅವಳು ಅವನ ಕೈಯಿಂದ ತನ್ನ ಸುಂದರ ಭಾವಚಿತ್ರವೊಂದನ್ನು ತನ್ನ ಮೂರು ದಿನಗಳ ಸಿಟ್ಟಿಂಗ್ ನಲ್ಲಿ ಬರೆಸದೇ ಬಿಡಲೇ ಇಲ್ಲ. ಮಹೇಶನ ಚಿತ್ರಕಲಾ ಜೀವನದಲ್ಲಿ ಅದೊಂದು ಮೈಲಿಗಲ್ಲು. ಅದನ್ನು ದೆಹಲಿಯಲ್ಲಿ ನಡೆದ ಬೃಹತ್ ಚಿತ್ರಕಲಾ ಪ್ರದರ್ಶನವೊಂದಕ್ಕೆ ಸುಲಕ್ಷಣಾಳ ಒಪ್ಪಿಗೆಯಾದ ಮೇರೆಗೇನೆ ಕಳುಹಿಸಿಕೊಟ್ಟ. ಒಂದು ತಿಂಗಳ ನಂತರ ಫಲಿತಾಂಶ ಪ್ರಕಟವಾಗಿತ್ತು. ‘ ಸ್ತ್ರೀ ಚೇತನ ’ ಎಂಬ ಶೀರ್ಷೀಕೆ ಹೊತ್ತಿದ್ದ ಆ ಭಾವಚಿತ್ರಕ್ಕೆ ಪ್ರಥಮ ಬಹುಮಾನ ಬಂದಿತ್ತು... ಆಗ ಸುಲಕ್ಷಣಾ ಎಂದಿಲ್ಲದೇ ಸಂಭ್ರಮಿಸಿದ್ದಳು. ಆ ರಾತ್ರಿ ಹೊರಗಿನ ಸ್ಟಾರ್ ಹೋಟೆಲೊಂದರಲ್ಲಿ ಭರ್ಜರಿ ಊಟ ಮುಗಿಸಿ ಬಂದಿದ್ದರು. ಮಹೇಶ ತನ್ನೇಲ್ಲಾ ಸ್ನೇಹಿತರಿಗಿಂತಲೂ ತನ್ನ ಹೆಂಡತಿಗೆ ಮೊದಲು ಪಾರ್ಟಿ ಕೊಡಿಸಿದ್ದ. ಅಂದು ರಾತ್ರಿ ಮನೆಗೆ ಬಂದಾಗ ಸುಲಕ್ಷಣಾ ಗಂಡನೆದೆಗೆ ಒರಗಿ ವಿರಮಿಸಿಕೊಳ್ಳುತ್ತಾ ತಾನೇನೂ ರಸಿಕತೆಯಲ್ಲಿ ಅವನಿಗಿಂತ ಕಡಿಮೆ ಇಲ್ಲವೆಂಬತೆ ಮೆಲ್ಲನೆ ಹಾಸಿಗೆಯಲ್ಲಿ ಬಾಳೆ ಹಣ್ಣಿನ ಸಿಪ್ಪೆಯಂತಯೇ ತೆರೆದು ಕೊಂಡಿದ್ದಳಲ್ಲ........ ಮಹೇಶನಿಗೆ ಸ್ವರ್ಗ ಮೂರೇ ಗೇಣು ಅನ್ನಿಸಿತ್ತು. ಹೆಣ್ಣು ತಾನಾಗಿ ಮೈಯೊಡ್ಡಿಕೊಳ್ಳುವುದರಲ್ಲಿರುವ ಸುಖಾತಿಶಯ ಗಂಡಿಗೆ ತೀರ ಸಂತಸವನ್ನೇ ತರುವುದೆಂಬುದನ್ನು ಮೊದಲ ಬಾರಿಗೆ ಕಂಡು ಕೊಂಡಿದ್ದ........ ಅವಳು ಎಂದಿನಂತೆ ಸುಖದ ಉತ್ಕಡಾವಸ್ಥಯಲ್ಲಿ ಭಯ ವಿವ್ಹಳಳಾದೇನೆ ಅಮಿತಾನಂದದಲ್ಲಿ ಸಹಕರಿಸಿದ್ದಳು. ಸಾವು ಈಗಲೇ ಬರಬಾರದೇನು ಎಂದು ಮುಲುಕಿದಳು. ಮಹೇಶ ಅವಳ ಬಾಯನ್ನು ತನ್ನದರಿಂದ ಮುಚ್ಚಿ ಚುಂಬಿಸಿ ಬಳಿಕ ಹೇಳಿದ.

“ ಈಗ ಗೊತ್ತಾಯಿತೇನೋ ಅಮ್ಮಾವ್ರಿಗೆ ಜೀವ ಸೃಷ್ಟಿಯ ಈ ರಹಸ್ಯ !...” ಅವಳನ್ನು ನಯವಾಗಿಯೆ ಮತ್ತೆ ನಲುಗಿಸಿದ್ದ. “ ಹೌದೂರೀ....... ನಾನೀಗ ಅಮ್ಮ ಆಗೋದೊಂದೆ ಬಾಕಿ... ” ಅವಳೆಂದಳು ತುಟಿಯಂಚಲೆ ನಗುತ್ತಾ.

“ ಅದೇನು ಸುಲಭ ಅಂದ್ಕೊಂಡಿದೀಯಾ....”

“ ಏನ್ರಿ ಹಾಗೆಂದರೆ.... ? ”

“ ಒಂಬತ್ತು ತಿಂಗಳು ಹೊಟ್ಟೆಯಲ್ಲೆ ಹೊತ್ತು .... ಡೆಲಿವರಿ ಪೈಯಿನ್ ಅನುಭವಿಸುವಾಗ ನಿನ್ನ ಗಂಡನ ಮೇಲೆ ಮತ್ತೆ ಎಲ್ಲಿಲ್ಲದ ಸಿಟ್ಟು ಬಂದರೇನೂ ಆಶ್ಚರ್ಯವಿಲ್ಲ... ” ಮಹೇಶ ನಸು ನಕ್ಕ.

“ ಏನಿಲ್ಲ ಬಿಡ್ರಿ, ಡೆಲಿವರಿ ವಾರ್ಡಿನ ಹೊರಗೆ ಗಂಡನಾದ ಪ್ರಾಣಿ ಕೂಡ ತನ್ನ ಹೆಂಡತಿ ಒಳಗೆ ನೋವು ತಿನ್ನುತ್ತಿದ್ದಾಳಲ್ಲಾಂತ ಅತ್ತಿಂದಿತ್ತ ಓಡಾಡ್ತ ಸಂಕಟ ಪಡ್ತಾನೆ ಇರತ್ತೆ...... ನಾನು ನೋಡಿದೀನಿ ”

“ ಮತ್ತೇ ನಿನಗೆ ಗೊತ್ತೇನು ? ಲೇಬರ್ ಪೈಯಿನ್ ಅನುಭವಿಸಿ ಡೆಲಿವರಿಯಾದ ಕೂಡಲೇ ಆ ಹೆಣ್ಣಿಗೆ ಸಾಕಪ್ಪ ಸಾಕು ಈ ಗಂಡ ಎಂಬ ಪ್ರಾಣಿಯನ್ನು ಇನ್ನು ಹತ್ತಿರಾನೆ ಸೇರಿಸಬಾರದೂ ಅನ್ನಿಸಿದರೆ ಆಶ್ಚರ್ಯವಿಲ್ಲ ”

“ ಅಯ್ಯಾ, ಅದೆಲ್ಲ ಹಳೇ ಕಾಲದ ಹೆಂಗಸರಾಡುವ ಮಾತು ಬಿಡ್ರೀ ಕಂಡಿದೀನಿ.... ಈಗ ಹಾಗಿಲ್ಲ.... ಬೇಕಾದಷ್ಟು ಗರ್ಬನಿರೋದಕಗಳಿವೆಯಲ್ಲ .... ”

“ ನಮಗೆ ಒಂದೇ ಮಗು ಸಾಕೂಂತಿಯಾ ..... ನಿನಗೆ ಎರಡನೇ ಮಗು ಹೆರೋ ಧೈರ್ಯ ಬರುತ್ತೇನೂಂತ ....... ” ಬೇಕೆಂತಲೇ ಕೆಣಕಿದ. “ ಎಲ್ಲ ಧೈರ್ಯ ಬರುತ್ತೇ ಸಾಕು ಸುಮ್ನರ್ರಿ..... ಒಂದು ಗಂಡು ಒಂದು ಹೆಣ್ಣು ಬೇಡ್ವೇನು ..... ? . ” ಎಂದು ಅವನ ಬಾಯಿ ಮುಚ್ಚಿಸಿದಳು ; ಅಲ್ಲ ತಾನೆ ತುಟಿ ಮುಂದಾಗಿಸಿ ಮುಚ್ಚಿದಳು .

No comments:

Post a Comment