Saturday, March 27, 2010
ಜೀವನ ಮತ್ತು ಬದುಕು ಎರಡೂ ಒಂದೇ ಅಲ್ಲ!
ಬದುಕಿಗೂ ಮತ್ತು ಜೀವನಕ್ಕೂ ಇರುವ ವ್ಯತ್ಯಾಸವನ್ನು, ಮುಕ್ತಿಗೂ ಮತ್ತು ಅಮರತ್ವಕ್ಕೂ ಇರುವ ಅಂತರವನ್ನು ಗ್ರಹಿಸದೇ ಹೋದಾಗ ಎಲ್ಲಗೊಂದಲಗಳು, ಮನುಷ್ಯನ ಮನಸ್ಸಿನಲ್ಲಿ, ಹಾಗೂ ಮೌಢ್ಯಗಳು. ಅವುಗಳನ್ನೇ ಮಕ್ಕಳಿಗೆ ಪಾಠ ಒಪ್ಪಿಸುವುದಾಗುತ್ತದೆ. ಇಂದಿಗೂ ಬಹಳಷ್ಟು ಮಂದಿಗೆ ಬದುಕು ಮತ್ತು ಜೀವನ ಎರಡೂ ಒಂದೇ ಎಂದು ಭಾವಿಸಿದ್ದಾರೆ. ಜೀವನ ನಶ್ವರ ಎಂದು ಯಾರು ಹೇಳಿದರೋ ಅದು ಸರಿಯಲ್ಲ. ಬದುಕು ನಶ್ವರ. ಜೀವಿಸುವುದಕ್ಕಾಗಿ ನಾವು ಬದುಕುವುದಲ್ಲವೇ? ಅದ್ಯಾವಾಗ ಜೀವ ಹೋಗುತ್ತದೋ ಯಾರಿಗೂ ಗೊತ್ತಿಲ್ಲ. ಆಗ ಬದುಕು ಇರುವುದಿಲ್ಲ. ಜೀವ ಈ ಶರೀರವನ್ನು ತ್ಯಜಿಸಿ ಹೋಗುತ್ತದೆ. ಅದು ಪುನರ್ಜನ್ಮ ಪಡೆಯ ಬಹುದಾದರೂ ಅದೆಂದಿಗೂ ಶಾಶ್ವತ ಅಥವಾ ಅಮರ. ಜೀವವು ಸತ್ಯ ಸುಂದರ, ಹಾಗೆಯೇ ಈ ಜೀವನವೂ ಕೂಡ. ಇಂಥ ಅಮೂಲ್ಯ ಜೀವನವನ್ನು ಅನುಭವಿಸುವುದಕ್ಕಾಗಿಯೆ ನಾವು ಧೀರ್ಘಾಯುಷಿಗಳಾಗಿ ಬದುಕಲು ಪ್ರಯತ್ನಿಸಬೇಕು. ಶಾಶ್ವತ ಮುಕ್ತಿಗಾಗಿ ಎಂದು ಯಾರು ಹೇಳಿದರೂ ಅದು ಸರಿಯಲ್ಲ. ಮುಕ್ತಿ ಎಂಬುದು ಈ ಶರೀರದಿಂದ ಬಿಡುಗಡೆಯಷ್ಟೇ. ಅದೇ ಶಾಶ್ವತ ಹೇಗಾದೀತು! ನಾವು ಸತ್ಯಸುಂದರವಾದ ಈ ಪ್ರಪಂಚದಲ್ಲಿ ಜೀವಿಸುತ್ತೇವೆ.( We are living in this finite world) . ನಮ್ಮಬದುಕು ಬಂಧುರವಾಗಲು, ಸುಧೀರ್ಘವಾಗಲು ನಿತ್ಯವೂ ಪ್ರಯತ್ನಿಸಬೇಕು. ಇಲ್ಲಿಂದ ಮುಕ್ತರಾಗಿ ಅಮರತ್ವವನ್ನು ಹೊಂದಬೇಕು .( from this finite to infinite). ಅಂಥ ಮಹತ್ತರವಾದ ಸದಾಶಯ ನಮ್ಮದಾಗಬೇಕಲ್ಲವೇ.. ?
Subscribe to:
Posts (Atom)