Monday, January 17, 2011

ಶ್ರೀಮಂತರ ಮೋಜು ಮಾಯೆಯಾಗಿ ಕಾಡದಿರಲಿ...

ಬೆಂಗಳೂರು ಶ್ರೀಮಂತರ ಮೋಜಿನ ಬಡವರ ಕನಸಿನ ರಸ್ತೆ



ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್- ಪ್ರವೇಶಿಸುತ್ತಿದ್ದಂತೆಯೆ ತಲೆ ಎತ್ತಿ ನೋಡುವುದೇ ಬೇಡ, ನಾವು  ಆ ರಸ್ತೆಯಲ್ಲಿದ್ದೇವೆಂಬುದು ತಟ್ಟನೆ ಖಾತ್ರಿಯಾಗಿ ಬಿಡುತ್ತದೆ. ಅದು ಶ್ರೀಮಂತರ ಮೋಜಿನ ಷಾಪಿಂಗ್ ತಾಣ ಬಡವರ ಕನಸಿನ ಕಂಗಳಿಗೆ ಬಿರುಸಿನ ಬಾಣ.  ಮನಸ್ಸಿಗೇನು ಬಿಡಿ! ಶ್ರೀಮಂತ ಬಡವ ಎಂಬ ತಾರತಮ್ಯವೇನಿಲ್ಲ; ಅದರ ಇರವು ಹೊರಬೀಳುವುದು ಕಣ್ಣಿನಲ್ಲಿ, ಅಲ್ಲದೇ ಅದನ್ನು ಹೊರಹಾಕಿದಾಗ ಬಳಸುವ ಕೈಗಳಲ್ಲಿಯೆ..ಮನಸ್ಸು ಮುಗಿಲಾಚೆಗೂ ಹಾರಿಬಿಡುತ್ತದೆ. ಮನಸ್ಸಿನೊಂದಿಗೆ ಮೈಯನ್ನೂ ಹೊಂದಿಸಿಕೊಂಡು ಸಾಗಿದರೇನೇ ನಿಯಂತ್ರಣ ಗೊತ್ತಾದೀತು! ಆಗ ನಿಜಕ್ಕೂ ಮುಗಿಲ ಮೋಹ ಹಾರಿಹೋಗುತ್ತದೆ. ಬದುಕಿಗೆ ಒಂದು ಮಜಲಾದರೂ ಸಿಗುತ್ತದೆ.
ಅಷ್ಟಕ್ಕೂ ಸಿಕ್ಕುವುದೆಷ್ಟೆಂಬುದಕ್ಕಿಂತ ದಕ್ಕಿಸಿಕೊಳ್ಳವುದೆಷ್ಟೆಂಬುದು ಸ್ವಾರ್ಥವಷ್ಟೇ ಅಲ್ಲ; ಸಾಮರ್ಥ್ಯದ ಕೆಲಸ. ದಕ್ಕಿಸಿಕೊಳ್ಳಲು ಸಾಧ್ಯವಿದ್ದರೂ ದೊರೆಯದಂತೆ ಮಾಡುವುದೂ ಮೋಸದ ಮನಸ್ಸಿನ ಕೆಲಸ. ಇಂತಹ ಮನಸ್ಸುಗಳ ನಡುವೆ ಪ್ರಕೃತಿ ಸಹಜ ಸ್ನೇಹದಲಿ ಮೊಳೆತು ಮೊಗ್ಗಾಗಿ ಅರಳುವುದೇ ಹೂವಿನಾ ಸೊಗಸು;  ಅದೇ ಫಲಕೊಡುವ ನನಸು.   ಆಂ, ಇಲ್ಲವೇಇಲ್ಲ, ಶುದ್ಧ ಮನಸಿನ ಹಿಡಿತವಿರುವ ಬದುಕಿನಲಿ ಇರಿಸು ಮುರಿಸು. ಕ್ಷಣ ಭೃಂಗುರವಾಗಿ ಕಾಡದಿರಲಿ ಮಾಯೆಯ ಮುಸುಕು.

No comments:

Post a Comment