Saturday, April 3, 2010

ಆಧುನಿಕತೆಯಲ್ಲಿ ಸ್ವಚ್ಛಂಧ ಜೀವನ ಶೈಲಿ.....

ತಾವು ನೋಡುತ್ತಿರುವುದೇ ..ಇದು..? ತಾವೇಕೆ ಸುಮ್ಮನಿರಬೇಕು? "ಆಧುನಿಕ ಜೀವನ ಶೈಲಿಯೆಂದರೆ ಇದೇ, ಲೈಫ್ ಎನ್ಜಾಯ್ ಮೆಂಟ್" ಎಂದರೆ ಇದೇ ಎಂದು ತಿಳಿದಿರುವ ಮುಂದುವರೆದಿರುವ ಹೊಸ ಪೀಳಿಗೆಯ ದೌಡು ಧಾವಂತವೇ ಇದಾಗಿದೆ.!

ಹಳೆಯ ಸಂಪ್ರದಾಯಿಕ ಕಟ್ಟು ಪಾಡು ಕಟ್ಟಳೆಗಳು ಆ ಗುಂಪಿನ ಸ್ವಚ್ಛಂಧ ಪ್ರವೃತ್ತಿಗೆ ಅಡ್ಡಿಯಾಗುತ್ತವಲ್ಲ..! ಮನುಷ್ಯನ ದೌರ್ಬಲ್ಯ ಹೀಗಾಡಿಸುತ್ತದೆ; ಅವನನ್ನು ಮನುಷ್ಯನಾಗಿ ಉಳಿಯಗೊಡುವುದಿಲ್ಲವಲ್ಲ. ಮನುಷ್ಯನ ಆ ದೌರ್ಬಲ್ಯವನ್ನೇ en-cash ಮಾಡುವುದು ಇಂದಿನ ಮೀಡಿಯಾಗಳ ಪೈಪೋಟಿ ಬಿಸಿನೆಸ್ ಆಗಿಬಿಟ್ಟಿದೆಯಲ್ಲ....

ಅಲ್ಲದೇ, ಪಾಪ, ಕೆಲ ಹರೆಯದ ಹೈಕಳುಗಳಿಗೆ ಇಂದಿನ ಟಿ.ವಿ. ಸಿನಿಮಾ ಮತ್ತು ಇಂಟರ್ ನೆಟ್ ಮಾಧ್ಯಮಗಳು ತೋರಿಸುವುದನ್ನೇ ನೋಡುತ್ತಾ ದಿನಕಳೆಯುವಾಗ ತಮ್ಮ ಇಂದ್ರಿಗಳ ನಿಗ್ರಹವೇ ಕಷ್ಟವಾಗಿದೆಯಲ್ಲ....ಈಗೇನೂ ಬಾಲ್ಯವಿವಾಹವಿಲ್ಲ ನೋಡಿ (ಛೇ ಛೆ, ಸುಮ್ಮನೆ ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಮದುವೆ ಮಾಡಿಬಿಡೋದೇ ವಾಸಿ ಅನ್ನೋ ಹೆತ್ತವರ ಸಂಖ್ಯೇ ಜಾಸ್ತಿಯಾಗ್ತಿರೋದು ಸುಳ್ಳಲ್ಲ)

ಸುಪ್ರಿಂಕ್ರೋರ್ಟ್ ಹೇಳಿರುವುದರಲ್ಲಿ ಈ ಕೆಳಗಿನ ಅಂಶವೂ ಅಡಗಿದೆಯಲ್ಲ, .
ಈ ಹರೆಯದ ಹೈಕಳುಗಳು ಯಾವಾಗ ಎಲ್ಲಿರುತ್ತವೆ? ಏನು ಮಾಡುತ್ತವೆ ? ಏನು ನೋಡುತ್ತಿರುತ್ತವೆ? ಯಾರೊಡನೆ ಮೊಬೈಲ್ ನಲ್ಲಿ ಮಾತನಾಡುತ್ತವೆ? ಯಾರೊಂದಿಗೆ ಹೊರಗೆ ಹೋಗಿ "ಲೈಫ್ ಎನ್ಜಾಯ್" ಮಾಡುತ್ತಿರುತ್ತವೆ? ಅದನ್ನ ಯಾವ ಪರಬ್ರಹ್ಮನಿಗೂ ಹೇಳಲು ಸಾಧ್ಯವಿಲ್ಲದಿರುವಾಗ, ಅಯ್ಯೋ ದೇವರೇ ಹೌದಲ್ಲಾ...ನಮ್ಮ ಸುಪ್ರೀಂ ಕೋರ್ಟ್ ಏನು ಮಾಡುತ್ತದೆ? ಕಾನೂನಿನ ತೆಕ್ಕೆಗೆ ಸಿಗಲಾರದ ವಿಷಯವಿದು ಎನ್ನುತ್ತದೆ..? ಹೆತ್ತವರಗೋಳು ಕೇಳೋರ್ಯಾರು?

ನಮ್ಮ ಹರೆಯದ ದಿನಗಳೊ ಹೇಗಿದ್ದವು?... ಅಂತಿರಾ ಎನ್ನುತ್ತವೆ ವಯಸ್ಸಾದ ಮುದುಕರ ಗುಂಪು ಅರಳೀ ಕಟ್ಟೇಲಿ..
ಒಂದು ಅಶ್ಲೀಲ ಮ್ಯಾಗಸಿನ್ ಸಿಗೊದು, ಅಂಥದೊಂದು ಚಿತ್ರ ಮ್ಯಾಗಸಿನ್ ನಲ್ಲಿ ಇರೊದಿರಲಿ ಹುಡುಕೋದು ಭಾಳಾ ಕಷ್ಟಾ ಇತ್ತು. ತಕ್ಷಣ ಅದನ್ನೆ ಎತ್ತಂಗ್ಡಿ ಮಾಡೋರು ನೋಡಿ. ಹೌದು, ಯಾವೊಂದು ದೃಶ್ಯಮಾಧ್ಯಮ ( ಆಗ ಕಂಪ್ಯೂಟರ್- ಇಂಟರ್ ನೆಟ್ ಇರಲಿಲ್ಲ ಬಿಡಿ),
ಅಂದರೆ, ಸಿನಿಮಾ (ನಾಟಕಗಳು ಸಹ) ಸಮಾಜ ಸುಧಾರಣೆಯನ್ನು ತೀರ ಗಂಭೀರವಾಗಿ ತೆಗೆದುಕೊಂಡಿತ್ತೋ ಅದೇನಾಗಿದೆ ಇವತ್ತು..? ಆ ಸಿನಿಮಾ ಕಲಾ ಮಾಧ್ಯಮವಾಗಿ ಉಳಿದಿಲ್ಲ. ಅವರೇ ಹೇಳುವಂತೆ- ಫಿಲಂ ಇಂಡಸ್ಟ್ರಿ ಯಾಗಿದೆ. ಕೋಟಿಗಟ್ಟಲೆ ಹಾಕುವುದು ಕೋಟಿಗಟ್ಟಲೇ ಬಾಚುವುದಷ್ಟೇ... ಇನ್ನು ಮಹಾನ್ ತಾರಾಮಣಿಗಳ ನಟನಾವಳಿಗಳ ಬಗ್ಗೆ ಹೇಳಿದರೆ....ಆ ಗುಂಪಿನ ಹೈಕಳುಗಳಿಗೆ ಎಲ್ಲಿಲ್ಲದ ಸಿಟ್ಟು ಬಂದೀತು..ಜೋಕೆ ಅನ್ನೋಹಾಗಿದೆ...

ಹೀಗಾಗಿದೆ ನಮ್ಮ ವ್ಯವಸ್ಥೇ....ಅಯ್ಯೋ ಪಾಪ! ಅವುಗಳಿಗೆ ಕಂಟ್ರೋಲ್ ಮಾಡ್ಕಳ್ಳಿಕ್ಕೆ ಕಷ್ಟಾಯ್ತದೇರೀ.... ನಮ್ಮ ಕಾಲ್ದಂಗೇ ನಾಚಿಕೇನೆ ಭೂಷಣಾಂತ ಬಳುಕ್ತಾ ಎದೆ ಬಾಗಿಸಿಕೊಂಡು ಬರೋವು, ಅಲ್ಲ ಈಗ ಸೆಟೆಸಿಕೊಂಡು ನಡೆಯುತ್ತವೇ... ಅವು ಇದಿರಿಗೇ ಬರೋವೂ....ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ಗಳು, ಅವುಗಳೊಳಗಣ ಡೇಟಿಂಗ್ ಅಂತ ಬೇರೆ ಐತ್ರಪ್ಪಾ...ಅದೆಲ್ಲ ಈವಾಗೆಲ್ಲ ಎಲ್ಲ ಸುಲಭ... ರಸ್ತೇಲಿ ಹೋಗೋವಾಗ ಯಾವ ದೊಡ್ಡ ಮನುಷ್ಯಾ ಇರಲಿ, ಹಿರಿಯರಿರಲಿ ವಯಸ್ಸಾದ ಮುದುಕರಿರಲಿ ಅವರೇ ಇವರನ್ನ ನೋಡಿ ನಾಚ್ಗೋ ಬೇಕು ಮಾರಾಯ್ರೇ.....

ಇನ್ನು ಸೈಬರ್ ಅಡ್ಡೆಯಲ್ಲಂತು ಏನೇನೆಲ್ಲಾ ನೋಡ್ಕಂಡ್ ಬರ್ತಾವೆ... ! "ಇದೇನ್ ಬೊಂಬಾಟ್ ಪರಪಂಚ ಎಲ್ಲಾ ಪ್ರಾಣಿಗೊಳ್ ಹಾಗೆ ನಾವು ಬೇಕಾಬಿಟ್ಟಿ ಇರ್ಬೋದೂಂದ್ರೇ... ಅಲ್ಲಾ, ನಮ್ಮ ಮನೆಗಳಲ್ಲೇನಪ್ಪಾ ಇದು ಹಳೇ ಕಂದಾಚಾರ, ಗೊಡ್ಡು ಸಂಪ್ರದಾಯ ಕಟ್ಟು ನಿಟ್ಟೂ... ನಮ್ಮ ಭವಿಷ್ಯ ನಮ್ಮ ಎನ್ಜಾಯ್ ಮೆಂಟೂ ನಾವೇ ರೂಪಿಸ್ಕೋತೀವಿ... ನಾವೇನ್ ಸಣ್ಣ ಮಕ್ಕಳಾ...."

ಇನ್ನು ದಿನೇ ದಿನೇ ಈ ಸಮಾಜಿಕ ವ್ಯವಸ್ಥೆ ಅದೆಷ್ಟು ಹದಗೆಟ್ಟಿ ಹೋಗ್ತಿದೇಂದ್ರೆ....?
ಸುಪ್ರೀಂ ಕೋರ್ಟು ಇರಲಿ ಆ ಪರಮಾತ್ಮನ ಕೋರ್ಟೂ ರಿಪೇರಿ ಮಾಡ್ಲಿಕ್ಕೆ ಸಾಧ್ಯ ಇಲ್ಲವಲ್ಲ...
ಎಲ್ಲ ಹಣದಮೇಲೆ ನಡೆಯುತ್ತೇರಿ ಅದರ ಮೇಲೆ ನಿಂತಿದೆಯಲ್ಲಾ...ಹಣವೆ ಎಲ್ಲವೂ ಅಲ್ಲ ಅಂದ್ರೆ ಕೇಳುವ ಮಕ್ಕಳೆಷ್ಟು ಮಂದಿ...?.
****

ಒಟ್ಟಿನಲ್ಲಿ ಹರೆಯದ ಹೆಣ್ಣು ಗಂಡುಗಳು ಹುಟ್ಟಿನಿಂದ ಯಾವ ಸಂಸ್ಕಾರ ಪಡೆದು ಬಂದಿದ್ದಾರೆ, ಚಿಕ್ಕಂದಿನಿಂದ ಎಲ್ಲಿ ಹೇಗೆ ಯಾವ ರೀತಿ ಹಾಗೂ ಶಿಸ್ತಿನಲ್ಲಿ ಬೆಳೆದಿದ್ದಾರೆ; ಅವರ ತಂದೆ ತಾಯಿಗಳು ಬೆಳೆಸಿದ್ದಾರೆ ಎನ್ನುವುದರ ಹೊರತಾಗಿಯೂ, ನಾವು ಇಂದಿನ ದಿನಗಳಲ್ಲಿ ಕಾಣುವುದೇನ್ರಪ್ಪಾ...ನಮ್ಮ ಹೈಕಳುಗಳಿಗೆ ಅವರವರ ಆತ್ಮವೇ ಕಾಪಡಬೇಕು; (ಅದರ ಬಗ್ಗೆ ನಂಬಿಕೆ ಇದ್ದರೆ..).... ಹೆತ್ತವರಿಗೆ ? ಬಿಡಿ ಆ ಪರಮಾತ್ಮನ ಮೊರೆ ಹೋಗದೇ ಬೇರೆ ದಾರಿನೇ ಇಲ್ಲ... ಹೆಚ್ಚೆಂದರೆ, ಅವರ ಪೂರ್ವ ಪುಣ್ಯವೇ ಅವರನ್ನ ಅವರ ಮಕ್ಕಳನ್ನ ರಕ್ಷಿಸಬೇಕು.. ಅಲ್ಲವೇ...ಇಲ್ಲರೀ ಕಡಿಮೆಯಾದರು ಒಳ್ಳೆ ಹುಡುಗರು/ಹುಡ್ಗೇರು ಇದಾರೆ ಅಂತಿರಾ....
***
ಹೌದ್ಹೌದು, ಇದಾರ್ರಪ್ಪಾ, ಹೀಗೆ ಹದಗೆಟ್ಟಿರೊ ವ್ಯವಸ್ಥೆಯಿಂದ ಮತ್ತು ಅಶ್ಲೀಲ ಫ್ಯಾಷನ್ ಪ್ರಪಂಚದಿಂದ ಹಣದ ಅಟ್ಟಹಾಸದ ಪ್ರಭಾವದಿಂದ ದೂರಾಗಿಯೆ ಬದುಕುವ ಕಟ್ಟಾ ಬ್ರಹ್ಮಚಾರಿ ಹೈಕಳುಗಳಿದ್ದಾರೆ! ಅವರು ನೊಡ್ರೆಪ್ಪಾ.. ನಿಜಕ್ಕೂ ಸತ್ವಶಾಲಿಗಳೇ...ಏನೆಲ್ಲವನ್ನೂ ತಮ್ಮ ನಿಯಂತ್ರಣದಲ್ಲಿರಿಸಿಕೊಂಡು ಬದುಕುವಂತಹ ಜಾಣ ಜಾಣಯರೇ ಧೀರ-ಧೀರೆಯರೇ ಸರಿ.
ಏನೆ ಆಗಲಿ, ಎಲ್ಲಕಾಲಕ್ಕೂ ಸಾತ್ವಿಕರೂ ಸತ್ವಶಾಲಿಗಳಾದವರೂ ಯುವ ಪೀಳಿಗೆಯಲ್ಲಿ ಇದ್ದೇ ಇರುತ್ತಾರೆ. ಅವರಿಂದಲೇ ನಮ್ಮ ಸಮಾಜಮುಖಿ ಜೀವನ ಶೈಲಿ ಎಂದಿಗೂ ಆದರ್ಶಪ್ರಾಯವಾಗಿಯೇ ಇರುತ್ತದೆ ಅನ್ನೋದು ಅಕ್ಷರಶಃ ಸತ್ಯ ಕಣ್ರೆಪ್ಪಾ....

ಹೌದು, ಎಲ್ಲ ಕಾಲಕ್ಕೂ ಪರಮಪಾಪಿಗಳಿಗೆ ಸುಭಿಕ್ಷ ಕಾಲ..ಅಂದರು ನಮ್ಮ ದಾಸರು 15 ನೇ ಶತಮಾನದಲ್ಲೇ.. ಈಗ ಜನಸಂಖ್ಯೆ ಬೇರೆ ಜಾಸ್ತಿ ಆಗ್ತಾನೆ ಇದೆಯಲ್ಲ ಅವರೇ ಎಲ್ಲೆಲ್ಲೂ ಕಾಣ್ತಾರೆ... ಸಾತ್ವಿಕರು ಹಾಗೂ ಪುಣ್ಯವಂತರು ಸತ್ಯವಂತರ ಸಂಖ್ಯೆ ಕಾಲು ಭಾಗದಷ್ಟೇ......ಯಾವ ಗುಂಪಿಗೆ ಸೇರಬೇಕೆನ್ನುವುದನ್ನೂ ನಿರ್ಧರಿಸುವವರು ನಾವೇ....ಅಲ್ಲವೇನ್ರಪ್ಪಾ....